ಭಾರತಕ್ಕೆ ಮತ್ತೊಂದು ಸವಾಲ್ : ಕೊರೊನಾ ಮೂರನೇ ಅವತಾರ ಎಂಟ್ರಿ..!
ನವದೆಹಲಿ : ಒಂದಲ್ಲ… ಎರಡು ಅಲ್ಲ…ಏಕಾಏಕಿ ಟ್ರಿಪಲ್ ಮ್ಯುಟೆಂಟ್ ದೇಶಕ್ಕೆ ಹೊಸ ಸವಾಲನ್ನು ಎಸೆಯುತ್ತಿದೆ. ದೇಶದಲ್ಲಿ ಕೊರೊನಾ ಅಬ್ಬರದ ಬೆನ್ನಲ್ಲೆ ಕೊರೊನಾ ಮೂರನೇ ಅವತಾರ ಬೆಳಕಿಗೆ ಬಂದಿದೆ.
ಡಬಲ್ ಮ್ಯುಟೆಂಟ್ ದೇಶದಲ್ಲಿ ಅಲ್ಲಕಲ್ಲೋಲ ಸೃಷ್ಟಿ ಮಾಡುತ್ತಿರುವ ಈ ಸಂದರ್ಭದಲ್ಲಿ ಟ್ರಿಪಲ್ ಮ್ಯುಟೆಂಟ್ ಇನ್ನೇಷ್ಟು ಅಪಾಯಕಾರಿಯಾಗುತ್ತೋ ಅನ್ನೋ ಆತಂಕ ಮನೆ ಮಾಡುವಂತೆ ಮಾಡಿದೆ.
ಏನಿದು ಟ್ರಿಪಲ್ ಮ್ಯುಟೆಂಟ್..?
ಎರಡು ತಳಿಯ ಕೊರೊನಾ ವೈರಸ್ ಸಂಗಮಗೊಂಡು ಉದ್ಭವಿಸಿದ್ದ ಹೊಸ ತಳಿಗೆ ಡಬಲ್ ಮ್ಯುಟೆಂಟ್ ಎನ್ನಲಾಗುತ್ತದೆ. ಈಗ ಇದು ಮೂರು ವೈರಸ್ ಗಳ ಸಂಗಮವಾಗಿದೆ.
ಅದಕ್ಕೆ ಟ್ರಿಪಲ್ ಮ್ಯುಟೆಂಟ್ ಎಂದು ಹೇಳಲಾಗಿದೆ. ಇದಕ್ಕೆ ದೇಹದಲ್ಲಿನ ಪ್ರತಿಕಾಯ ಶಕ್ತಿಯನ್ನೂ ಮಣಿಸುವ ಲಕ್ಷಣವಿದೆ ಎಂದು ತಜ್ಞರು ಹೇಳಿದ್ದಾರೆ.
ಮಹಾರಾಷ್ಟ್ರ, ದೆಹಲಿ, ಬಂಗಾಳ ಮತ್ತು ಛತ್ತಿಸ್ ಗಢದಲ್ಲಿ ಟ್ರಿಪಲ್ ಮ್ಯುಟೆಂಟ್ ವೈರಸ್ ಬೆಳಕಿಗೆ ಬಂದಿದೆ. ಮೊದಲು ಈ ವೈರಸ್ ಅನ್ನು ಬಂಗಾಳದಲ್ಲಿ ಗುರುತಿಸಲಾಗಿದೆ ಎಂದು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ ಮತ್ತು ಇಂಟಿಗ್ರೇಟಿವ್ ಬಯಾಲಜಿಯ ವಿಜ್ಞಾನಿ ವಿನೋದ್ ಸ್ಕರಿಯಾ ಹೇಳಿದ್ದಾರೆ. ಟ್ರಿಪಲ್ ವೆರಿಯಂಟ್ ಗಾಳಿಯ ವೇಗದಲ್ಲಿ ಹರಡುತ್ತದೆ ಎಂದು ಮೆಕ್‍ಗಿಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಧುಕರ್ ಪೈ ತಿಳಿಸಿದ್ದಾರೆ.