ಜಿಮೇಲ್ ಪಾಸ್ ವರ್ಡ್ ಮರೆತು ಹೋಗಿದೆ… ರಿಸೆಟ್ ಮಾಡೋದು ಹೇಗೆ ಹೇಳಿ.. ಗೂಗಲ್ CEO ಬಳಿಯೇ ಸಲಹೆ ಕೇಳಿದ ನೆಟ್ಟಿಗ..!
ನಾವು ಅನೇಕ ಬಾರಿ ಸೋಷಿಯಲ್ ಮೀಡಿಯಾಗಳಲ್ಲಿನ ಖಾತೆಗಳ ಪಾಸ್ ವರ್ಡ್ ಗಳನ್ನ ಮರೆತುಹೋಗಿ ಸಾಕಷ್ಟು ಗೊಂದಲ್ಲಕ್ಕೆ ಈಡಾಗ್ತಿವೆ. ಇದು ಸರ್ವೇ ಸಾಮಾನ್ಯ. ಫೇಸ್ ಬುಕ್ , ಟ್ವಿಟ್ಟರ್ , ಇನ್ಸ್ಟಾಗ್ರಾಮ್ ಅದ್ರಲ್ಲೂ ಹೆಚ್ಚಾಗಿ ಜಿ ಮೇಲ್ ಪಾಸ್ ವರ್ಡ್ ಮರೆಯುತ್ತಾ ಇರುತ್ತೇವೆ. ಆದ್ರೆ ಇಂತಹ ಸಮಸ್ಯೆಗಳನ್ನ ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದು ಸಹ ನಮಗೆ ಇಂಟರ್ ನೆಟ್ ಮೂಲಕವೇ ಉಪಾಯ ಸಿಗುತ್ತೆ. ಆದ್ರೆ ಸಮಸ್ಯೆ ಪರಿಹಾರಕ್ಕೆ ಯಾರಾದರೂ ನೇರವಾಗಿ ಗೂಗಲ್ ನ CEO ಸುಂದರ್ ಪಿಚ್ಚೈ ಬಳಿಯೇ ಸಲ್ಯೂಷನ್ ಕೇಳೋ ಯೋಚನೆ ಮಾಡಬಹುದಾ…?
ಮಾಡಬಹುದಾ…? ಅಲ್ಲಾ.. ಈಗಾಗಲೇ ವ್ಯಕ್ತಿಯೋರ್ವ ಸುಂದರ್ ಪಿಚ್ಚೈ ಬಳಿಯೇ ನೇರವಾಗಿ ತನ್ನಸಮಸ್ಯೆಗೆ ಪರಿಹಾರ ಕೇಳಿದ್ದಾನೆ. ಟ್ವಿಟರ್ ಬಳಕೆದಾರರೊಬ್ಬರು ಸುಂದರ್ ಪಿಚ್ಚೈ ಬಳಿ ಜಿಮೇಲ್ ಪಾಸ್ವರ್ಡ್ ಹುಡುಕಲು ಸಹಾಯ ಮಾಡುವಂತೆ ಕೋರಿ ಟ್ವೀಟ್ ಮಾಡಿದ್ದಾರೆ..! ಹೆಲ್ಲೋ ಸರ್, ನೀವು ಹೇಗಿದ್ದೀರಿ..? ನಾನು ಜಿಮೇಲ್ ಐಡಿ ಪಾಸ್ವರ್ಡ್ಗಳನ್ನ ಕಳೆದುಕೊಂಡಿದ್ದೇನೆ. ದಯಮಾಡಿ ಪಾಸ್ವರ್ಡ್ ರಿಸೆಟ್ ಮಾಡೋದು ಹೇಗೆ ಎಂದು ಹೇಳಿ. ದಯಮಾಡಿ ಸಹಾಯ ಮಾಡಿ ಎಂದು ಟ್ವೀಟ್ ಮಾಡಿ ಹಲ್ ಚಲ್ ಸೃಷ್ಟಿ ಮಾಡಿದ್ದಾನೆ.
ಈ ಟ್ವೀಟ್ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಪಿಚ್ಚೈ ಉತ್ತರಕ್ಕೆ ಕಾಯ್ತಾಯಿದ್ದಾರೆ. ಇತ್ತೀಚೆಗೆ ಸುಂದರ್ ಪಿಚ್ಚೈ ಕೋವಿಡ್ 19 ವಿಚಾರವಾಗಿ ಟ್ವೀಟ್ ಮಾಡಿ, ದೇಶದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಗೂಗಲ್ ಹಾಗೂ ಗೂಗಲ್ ಸಿಬ್ಬಂದಿ ಒಂದಾಗಿ 135 ಕೋಟಿ ರೂಪಾಯಿ ದೇಣಿಗೆ ನೀಡಲಿದೆ ಎಂದು ಟ್ವೀಟ್ ಮಾಡಿದ್ದರು. ಈ ಪೋಸ್ಟ್ಗೆ ಸಂಬಂಧಿಸಿ ಮದನ್ ತಮ್ಮ ಜಿಮೇಲ್ ಗೊಂದಲದ ಬಗ್ಗೆ ಟ್ವೀಟ್ ಮಾಡಿದ್ದಾರೆ.