ತೆಲುಗು ಸಿನಿಮಾರಂಗದಲ್ಲಿ ಕನ್ನಡದ ‘ಕಿಸ್’ ಬ್ಯೂಟಿ ಶ್ರೀಲೀಲಾ ಹವಾ..!
ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿ, ಭರಾಟೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ಅಭಿನಯಿಸಿ ಕನ್ನಡ ಹುಡುಗರ ಕ್ರಷ್ ಆಗಿರುವ ಶ್ರೀಲೀಲಾ… ಟಾಲಿವುಡ್ ನಲ್ಲಿ ಕಮಾಲ್ ಮಾಡ್ತಿದ್ದಾರೆ.. ಹೌದು… ಕ್ಯೂಟ್ ಬ್ಯೂಟಿ ಶ್ರೀಲೀಲಾ ಪ್ರಸ್ತುತ ಧನ್ವೀರ್ ಜೊತೆ ‘ಬೈ ಟು ಲವ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತೆಲುಗು ಸಿನಿಮಾರಂಗದಲ್ಲೂ ನಿಧಾನವಾಗಿ ನೆಲೆಯೂರುತ್ತಿದ್ದಾರೆ.
ತೆಲುಗಿನಲ್ಲಿ ಈಗಾಗಲೇ ಸಿನಿಮಾವೊಂದರ ಶೂಟಿಂಗ್ ಮುಗಿಸಿರುವ ಶ್ರೀಲೀಲಾ ಅಭಿನಯಿಸುತ್ತಿರುವ ಬೈಟು ಕಾಫಿ ಸಿನಿಮಾ ಸಹ ತೆಲುಗಿನಲ್ಲೂ ರಿಲೀಸ್ ಆಗಲಿದೆ ಎನ್ನಲಾಗಿದೆ. ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾದಲ್ಲಿ ರೋಶನ್ ಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದು, ಸಿನಿಮಾ ರಿಲೀಸ್ ಆಗಬೇಕಿದೆ. ಇದೀಗ ‘ಬೈ ಟು ಲವ್’ ತೆಲುಗಿಗೂ ಡಬ್ ಆಗಲಿದ್ದು, ಎರೆಡೂ ಬಾಷೆಗಳಲ್ಲಿಯೂ ಒಟ್ಟಾಗಿ ರಿಲೀಸ್ ಆಗಲಿದೆ ಎನ್ನಲಾಗಿದೆ.