ನೌಕಾಪಡೆಯ ಬಲ ‘ಐಎನ್ಎಸ್ ಕಲ್ವರಿ’..! ನಮ್ಮ ನೌಕಾಸೇನೆಯ ಹೆಮ್ಮೆ..!
ಭಾರತದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿಯು ನಮ್ಮ ನೌಕಾಸೇನೆಯ ಹೆಮ್ಮೆ. ಆಳ ಸಮುದ್ರದಲ್ಲಿದ್ದರೂ ಶತ್ರುವನ್ನು ಸದೆ ಬಡಿಯುವ ಸಾಮರ್ಥ್ಯ ಕಲ್ವರಿಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಆಧಿಪತ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾ ಹಿಂದು ಮಹಾಸಾಗರದಲ್ಲಿ ತನ್ನ ಬಲ ವರ್ಧಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವೇಳೆ ಐಎನ್ಎಸ್ ಕಲ್ವರಿ ಸೇರ್ಪಡೆ ಮೂಲಕ ನೌಕಾ ದಳಕ್ಕೆ ಆನೆ ಬಲ ಎಂದರೆ ತಪ್ಪಾಗಲಾರದು. ಫ್ರೆಂಚ್ ನೇವಲ್ ಡಿಫೆನ್ಸ್ ಆಂಡ್ ಎನರ್ಜಿ ಕಂಪನಿ ಡಿಸಿಎನ್ಎಸ್ ‘ಐಎನ್ಎಸ್ ಕಲ್ವರಿ’ಯನ್ನು ವಿನ್ಯಾಸಗೊಳಿಸಿದೆ. ಇದನ್ನು ಮಝಗೋನ್ ಡಾಕ್ ಲಿಮಿಟೆಡ್ ನಿರ್ಮಾಣ ಮಾಡಿದೆ.
ಸ್ಕಾರ್ಪಿನ್ ಸರಣಿಯ ಜಲಾಂತರ್ಗಾಮಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುತ್ತವೆ. ಇವು ಹಡಗು ನಿರೋಧಕ ಕ್ಷಿಪಣಿಗಳು, ಹೆಚ್ಚು ಸಾಮರ್ಥ್ಯದ ಟಾರ್ಪೆಡೊಗಳು ಮತ್ತು ಅತ್ಯಾಧುನಿಕ ಸಂವೇದಕಗಳನ್ನು ಹೊಂದಿರುತ್ತವೆ. ಅಲ್ಲದೇ ಸುಮಾರು 17 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಮೊದಲ ಸಾಂಪ್ರದಾಯಿಕ ಜಲಾಂತರ್ಗಾಮಿ ಎಂಬ ಹೆಗ್ಗಳಿಕೆಗೆ ಕಲ್ವರಿ ಪಾತ್ರವಾಗಿದೆ. ಇದು, ಡೀಸೆಲ್-ಎಲೆಕ್ಟ್ರಿಕ್ ದಾಳಿ ಜಲಾಂತರ್ಗಾಮಿಯಾಗಿದೆ.
೨೦೧೭ ರಲ್ಲಿ ಈ ಜಲಾಂತರ್ಗಾಮಿ ನೌಕೆ ಸೇವೆಗೆ ನಿಯೋಜನೆಗೊಂಡಿತು. ಈ ನೌಕೆ ದೀರ್ಘಕಾಲದ ವರೆಗೆ ನೀರಿನಾಳದಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹಿಂದೂ ಮಹಾಸಾಗರದಲ್ಲಿ ಕಂಡುಬರುವ ಡೆಡ್ಲಿ ಶಾರ್ಕ್ ಕಲ್ವರಿಯ ಹೆಸರನ್ನೇ ಈ ಜಲಾಂತರ್ಗಾಮಿಗೆ ಇಡಲಾಗಿದೆ. ಇದಕ್ಕೂ ಮುನ್ನ ಇದೇ ಹೆಅರಿನ ಜಲಾಂತರ್ಗಾಮಿ ನೌಕೆ ಒಂದು ಭಾರತೀಯ ನೌಕಾಸೇನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ೧೯೯೬ ರಲ್ಲಿ ಇದು ಸೇವೆಯಿಂದ ನಿವೃತ್ತಿ ಹೊಂದಿತ್ತು. ಐಎನ್ಎಸ್ ಕಲ್ವಾರಿ ನಿಖರವಾಗಿ ನಿರ್ದೇಶಿಸಲ್ಪಟ್ಟ ಆಯುಧಗಳ ಮೂಲಕ ಶತ್ರುಗಳ ಮೇಲೆ ಘಾತಕ ದಾಳಿಯನ್ನು ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. ರಹಸ್ಯವಾಗಿ ಚಲಿಸಬಲ್ಲ ಈ ಜಲಾಂತರ್ಗಾಮಿ ಗೆ ಸಾಟಿ ಮತ್ತೊಂದಿಲ್ಲ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವಿಶೇಷತೆಯೊಂದಿಗೆ ನಿಮ್ಮ ಮುಂದೆ ಬರ್ತೀವಿ.
ಶತ್ರುಗಳಿಗೆ ನಡುಕ ಹುಟ್ಟಿಸುವ ‘ಅರಿಹಂತ್ ಜಲಾಂತರ್ಗಾಮಿ ನೌಕೆ’..! INDIAN ARMY
‘ಸಮುದ್ರ ಸೇತು’ ಹೀರೋ ‘ INS ಜಲಾಶ್ವ ‘..! SALUTE TO INDIAN ARMY
INS ವಿಕ್ರಮಾದಿತ್ಯ.. ನೌಕಾಸೇನೆಯ ಆನೆಬಲ..!! INDIAN ARMY