ದಶಕದ ಬಳಿಕ ಗದ್ದುಗೆ ಏರಿದ ಡಿಎಂಕೆ : ಎಂ.ಕೆ.ಸ್ಟಾಲಿನ್ ಪ್ರಮಾಣವಚನ
ಚೆನ್ನೈ : ದ್ರಾವಿಡರ ನಾಡಲ್ಲಿ ದಶಕದ ಬಳಿಕ ಡಿಎಂಕೆ ಪಕ್ಷ ಗದ್ದುಗೆ ಏರಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಡಿಎಂಕೆ ಇನ್ಮದು ದ್ರಾವಿಡ ನಾಡಲ್ಲಿ ಅಧಿಕಾರ ಚಲಾಯಿಸಲಿದೆ.
ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ಎಂ.ಕೆ.ಸ್ಟಾಲಿನ್ ರಾಜ್ಯದ ನೂತನ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚೆನ್ನೈನಲ್ಲಿರುವ ರಾಜಭವನದಲ್ಲಿ ನಡೆದ ಸರಳ ಪದಗ್ರಹಣ ಸಮಾರಂಭದಲ್ಲಿ 68 ವರ್ಷದ ಎಂ.ಕೆ ಸ್ಟಾಲಿನ್ ಅವರಿಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು.
ಇನ್ನು ಸ್ಟಾಲಿನ್ ಸಂಪುಟದಲ್ಲಿ 19 ಮಾಜಿ ಮಂತ್ರಿಗಳು ಮತ್ತು 15 ಜನ ಹೊಸಬರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ.
234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ 159 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.








