ಮೈ ಝುಂ ಎನ್ನಿಸುವ ಭಾರತೀಯ ನೌಕಾಧಿಕಾರಿಗಳ ಕಠಿಣ ತರಬೇತಿ..!! – Part:1
ನೀವು ಈ ಹಿಂದಿನ ಸಂಚಿಕೆಗಳಲ್ಲಿ ಭಾರತೀಯ ನೌಕಾಸೇನೆಯ ಕೆಲವು ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಬಗ್ಗೆ ಮಾಹಿತಿಯನ್ನು ನೋಡಿದ್ರಿ. ನಾವೀವತ್ತು ನಿಮಗೆ ಭಾರತೀಯ ನೌಕಾಸೇನೆಯ ಅಕಾಡೆಮಿ ಯ ಬಗ್ಗೆ ಹೇಳಲಿದ್ದೇವೆ. ಇಲ್ಲಿ ಭವಿಷ್ಯದ ನೌಕಾಸೇನಾಧಿಕಾರಿಗಳನ್ನು ಹೇಗೆ ತರಬೇತಿಗೊಳಿಸಲಾಗ್ತದೆ ಅನ್ನೋದು ಬಹಳಷ್ಟು ಜನರಿಗೆ ತಿಳಿದಿಲ್ಲ.
ಸಾಮಾನ್ಯ ನಾಗರಿಕನಿಬ್ಬ ದೇಶ ರಕ್ಷಣೆಯ ಕನಸು ಹೊತ್ತು ಈ ಅಕಾಡೆಮಿ ಸೇರುತ್ತಾನೆ. ವರ್ಷಗಳ ಕಾಲ ಕಠಿಣ ತರಬೇತಿ ಪಡೆದು ಗರ್ವದಿಂದ ಹೊರಬರುತ್ತಾನೆ. ಈ ಹಾದಿ ನಿಜಕ್ಕೂ ರೋಚಕ.
ಕೇರಳದ ಎಜಿಮಲಾದಲ್ಲಿರುವ ಭಾರತೀಯ ನೌಕಾಸೇನಾ ಅಕಾಡೆಮಿ ಏಷ್ಯಾದ ಅತಿ ದೊಡ್ಡ ನೌಕಾ ಅಕಾಡೆಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಭಾರತೀಯ ನೌಕಾ ಸೇನೆ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಸೇರಲ್ಪಡುವ ಎಲ್ಲಾ ಅಧಿಕಾರಿಗಳಿಗೆ ವಿವಿಧ ವಿಭಾಗಗಳಲ್ಲಿ ಮೂಲಭೂತ ತರಬೇತಿಯನ್ನು ನೀಡಲಾಗುತ್ತದೆ.
ಇದು ಪ್ರಾಚೀನ ಕೇರಳದಲ್ಲಿ ಪ್ರವರ್ಧಮಾನಪಡೆದ ಬಂದರು ಮತ್ತು ವ್ಯಾಪಾರದ ಕೇಂದ್ರವಾಗಿತ್ತು, ಹಾಗೂ ೧೧ ನೇ ಶತಮಾನ ಎಡಿ ಸಂದರ್ಭದಲ್ಲಿ ನಡೆದ ಚೋಳ-ಚೇರ ಯುದ್ಧದ ಸಂದರ್ಭದಲ್ಲಿ ಪ್ರಮುಖ ಯುದ್ಧಭೂಮಿಯಾಗಿತ್ತು.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ನಿಂದ ತರಬೇತಿಯನ್ನು ಪಡೆದು ಹೊರಬರುವ ನೌಕಾ ಕೆಡೆಟ್‌ಗಳು ಸೂಕ್ತ ಅಗತ್ಯತೆಗಳನ್ನು ಪೂರ್ಣಗೊಳಿಸುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂತು. ಈ ಕಾರಣದಿಂದ ಕೊಚ್ಚಿನ್‌ನಲ್ಲಿ ಅಕಾಡೆಮಿಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಈ ಪ್ರಕಾರವಾಗಿ ೧೯೬೯ ರ ಜನವರಿಯಲ್ಲಿ ನೌಕಾದಳದ ಅಕಾಡೆಮಿಯೊಂದನ್ನು ಸ್ಥಾಪಿಸಲಾಯಿತು. ಕೊನೆಗೆ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ೧೯೮೭ ರ ಜನವರಿ ೧೭ ರಂದು ಎಜಿಮಲಾದ ನೌಕಾ ಅಕಾಡೆಮಿಗೆ ಶಂಕು ಸ್ಥಾಪನೆಯನ್ನು ಮಾಡಿದರು.
೨೦೦೯ರಲ್ಲಿ ಈ ಅಕಾಡೆಮಿ ಅಧಿಕೃತವಾಗಿ ಆರಂಭವಾಯಿತು. ಶಿಕ್ಷಾರ್ಥಿಗಳಿಗೆ ಐಎನ್ಎನಲ್ಲಿನ ಒಂದು ಸ್ಕ್ವಾಡ್ರನ್ ಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ಪ್ರತಿ ವಿಭಾಗದಲ್ಲಿ ಸುಮಾರು ೪೦ ಶಿಕ್ಷಾರ್ಥಿಗಳಂತೆ ಪ್ರತಿ ಸ್ಕ್ವಾಡ್ರನ್ ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ. ಕಮಾಂಡರ್/ ಲೆಫ್ಟಿನೆಂಟ್ ಕಮಾಂಡರ್ ಹುದ್ದೆಯ ಸ್ಕ್ವಾಡ್ರನ್ ಕಮಾಂಡರ್ ಅವರು ಸ್ಕ್ವಾಡ್ರನ್‌ನ ಮುಖ್ಯಸ್ಥರಾಗಿರುತ್ತಾರೆ ಮತ್ತು ಇವರಿಗೆ ಲೆಫ್ಟಿನೆಂಟ್ ಹುದ್ದೆಯ ವಿಭಾಗೀಯ ಅಧಿಕಾರಿಗಳು ಸಹಾಯ ಮಾಡುತ್ತಾರೆ.ತರಬೇತಿಯನ್ನು ಪ್ರತಿ ೨೨ ವಾರಗಳ ಅವಧಿಯ ಎಂಟು ಸೆಮಿಸ್ಟರ್‌ಗಳಾಗಿರುತ್ತದೆ. ಇನ್ನು ಇಲ್ಲಿ ಕೆಡೆಟ್ಗಳ ಜೀವನ ಶೈಲಿ ಹೇಗಿರುತ್ತೆ ತರಬೇತಿ ಹೇಗಿರುತ್ತೆ ಅನ್ನೋದ್ರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಖಿಯೋಣ.