ಕೋಲಾರದಲ್ಲಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಗೆ ಲಾಠಿ ಏಟು
ಕೋಲಾರ : ಲಾಕ್ ಡೌನ್ ವೇಳೆ ಹೊರಬಂದಿದ್ದು ಅಲ್ಲದೇ ಪೊಲೀಸರ ಮುಂದೆ ಅಸಭ್ಯವರ್ತನೆ ತೋರಿದ ಮಂಗಳಮುಖಿಗೆ ಲಾಠಿ ರುಚಿ ತೋರಿಸಿ, ಠಾಣೆಗೆ ಕರೆದೊಯ್ದ ಘಟನೆ ಕೋಲಾರ ನಗರದ ಅಮ್ಮವಾರಪೇಟೆಯಲ್ಲಿ ನಡೆದಿದೆ.
ಇಂದಿನಿಂದ ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋಲಾರದಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಇಂದು ಬೆಳಗಿನಿಂದಲೇ ರಸ್ತೆಗಿಳಿದು ಬೇಕಾಬಿಟ್ಟಿ ಓಡಾಡುತ್ತಿರುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.
ಈ ಮಧ್ಯೆ ಮೆಡಿಕಲ್ ಶಾಪ್ ಗೆ ಹೋಗಬೇಕು ಎಂದು ನೆಪ ಹೇಳಿಕೊಂಡು ಮಂಗಳಮುಖಿ ಪೊಲೀಸರ ಕೈಗೆ ಸಿಕ್ಕಿದ್ದು, ಪೊಲೀಸರು ಮಂಗಳಮುಖಿಗೆ ಲಾಠಿ ರುಚಿ ತೋರಿಸಿದ್ದಾರೆ.
ಇದರಿಂದ ಮಂಗಳಮುಖಿಯ ಬಲಗೈಗೆ ಪೆಟ್ಟಾಗಿದ್ದು, ರಕ್ತಬಂದಿದೆ. ಇದರಿಂಧ ಕೋಪಗೊಂಡ ಮಂಗಳಮುಖಿ ಪೊಲೀಸರ ಎದುರು ಸಭ್ಯವಾಗಿ ವರ್ತನೆ ಮಾಡಿದ್ದು, ಇದರಿಂದ ಪೊಲೀಸರ ಪಿತ್ತ ನೆತ್ತಿಗೇರಿದ್ದು, ಠಾಣೆಗೆ ಕರೆದೊಯ್ದಿದ್ದಾರೆ.










