ಉಸಿರಾಡು ಕರ್ನಾಟಕ ಅಂತ ಸಹಾಯಕ್ಕೆ ಮುಂದಾದ ವಿದೇಶಿ ಕನ್ನಡಿಗರು
ಬೆಂಗಳೂರು : ಕೊರೊನಾ ಕಾಟ, ಆಕ್ಸಿಜನ್ ಕೊರತೆಯಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಉಸಿರಾಡು ಕರ್ನಾಟಕ ಅಂತ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಹಾಯಕ್ಕೆ ಮುಂದಾಗಿದ್ದಾರೆ.
ಕೊರೊನಾದಿಂದ ತತ್ತರಿಸಿರುವ ಕರ್ನಾಟಕಕ್ಕಾಗಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು 30000 ಡಾಲರ್ ಹಣ ಕಲೆಹಾಕಿದ್ದಾರೆ.
ಈ ಹಣದಿಂದ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಖರೀದಿಸಿ ಕರ್ನಾಟಕ್ಕೆ ಕಳಿಸಿಕೊಂಡುವ ಕೆಲಸ ಮಾಡುತ್ತಿದ್ದಾರೆ.
ಮೊದಲ ಹಂತದಲ್ಲಿ 25 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ನ ಖರೀದಿಸಿರುವ ಕೆನಡಾ ಕನ್ನಡಿಗರೂ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ಮೂಲಕ ಅಗತ್ಯ ವಿರುವ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಟೊರೊಂಟೊ, ವ್ಯಾಂಕೋವರ್, ಮಾಂಟ್ರಿಯಲ್, ಒಟ್ಟಾವಾ ಸೇರಿದಂತೆ ಹಲವು ಭಾಗದ ವಿದೇಶಿ ಕನ್ನಡಿಗರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ನಿರ್ಮಾಪಕ ವಿನಯ್ ಬರತೂರ್ ಮತ್ತು ನಂದಕುಮಾರ್ ಈ ಕಾರ್ಯಕ್ರಮದ ರುವಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.









