ಆತಂಕ ಸೃಷ್ಟಿಸಿದೆ ಇಸ್ರೇಲ್- ಪ್ಯಾಲೆಸ್ಟೈನ್ ಸಂಘರ್ಷ..!! ಎರಡು ಶತಕಗಳ ಕಿಚ್ಚಿಗೆ ಕೊನೆಯೆಂದು?
ಗಾಜಾಪಟ್ಟಿಯಲ್ಲಿ ಹಮಾಸ್ ಬಂಡುಕೋರರ ಸಂಘರ್ಷ ತಾರಕಕ್ಕೇರಿದೆ. ಪವಿತ್ರ ರಂಜಾನ್ ಮಾಸ ಆರಂಭವಾಗುತ್ತಿದ್ದಂತೆಯೇ ಸಂಘರ್ಷ ಆರಂಭವಾಗಿದೆ. ಸದ್ಯ ಪರಿಸ್ಥಿತಿ ಬಿಗಡಾಯಿಸಿದ್ದು, ಯುದ್ಧ ನಿರ್ಮಾಣ ಪರಿಸ್ಥಿತಿ ತಲೆದೋರಿದೆ. ಗಾಜಾಪಟ್ಟಿಯ ಮೇಲೆ ಇಸ್ರೇಲ್ ಸೇನೆ ಸತತವಾಗಿ ದಾಳಿನಡೆಸುತ್ತಿದೆ. ಅಲ್ಲದೇ ಇಸ್ರೇಲ್ ನಲ್ಲಿ ಯಹೂದಿಗಳು ಮತ್ತು ಅರಬ್ಬರು ಬೀದಿಗಿಳಿದು ಗುದ್ದಾಡುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಎರಡೂ ದೇಶಗಳ ಸೇನಾ ಸಂಘರ್ಷದ ನಡುವೆ ಜನರು ದಂಗೆಗೆದ್ದಿರುವುದು ಆತಂಕಕ್ಕೆ ಕಾರಣವಾಗಿದೆ.
ಹಮಾಸ್ ಸಂಘಟನೆಗೆ ಶಸ್ತ್ರಾಸ್ತ್ರಗಳು ಸರಬರಾಜಾಗದಂತೆ ತಡೆಯಲು ಗಾಜಾಪಟ್ಟಿಯಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಿವೆ.ಈ ಕಾರಣದಿಂದ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಸಂಘರ್ಷಕ್ಕಿಳಿದಿವೆ. ಹಮಾಸ್ ಬಂಡುಕೋರರು ಇಸ್ರೇಲ್ ಸೇನಾಪಡೆಯ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಹಮಾಸ್ ಬಂಡುಕೋರರ ಮೇಲೆ ರಾಕೆಟ್ ದಾಳಿ ನಡೆಸಿದೆ. ಘಟನೆಯಲ್ಲಿ ಗಾಜಾಪಟ್ಟಿಯ ಕಟ್ಟಡಗಳು ನೆಲಸಮವಾಗಿವೆ. ಇಸ್ರೇಲ್ ನಡೆಸಿದ ರಾಕೆಟ್ ದಾಳಿಯ ವೇಳೆ ಹಮಾಸ್ ಬಂಡುಕೋರರ ಫೀಲ್ಡ್ ಕಮಾಂಡರ್ ನೆಲೆ ಮತ್ತು ಹಮಾಸ್ ಬಂಡುಕೋರರ ಸುರಂಗ ಮಾರ್ಗಗಳನ್ನಿ ಗುರಿ ಮಾಡಲಾಗಿತ್ತು.
ಜೆರುಸ್ಲೇಮ್ ನಲ್ಲಿರುವ ಅಲ್ ಅಕ್ಸಾ ಮಸೀದಿ ಮುಸ್ಲಿಂ ಮತ್ತು ಯಹೂದಿಗಳಿಗೆ ಪವಿತ್ರ ಸ್ಥಳ. ಈ ಮಸೀದಿಗೆ ಸಂಬಂಧಿಸಿದಂತೆ ಉಭಯ ಗುಂಪುಗಳ ನಡುವೆ ಸಂಘರ್ಷ ಇದ್ದೇ ಇರುತ್ತದೆ.
ಯಹೀದಿಗಳು ಮತ್ತು ಅರಬ್ಬರು ಹೆಚ್ಚಿನ ಪ್ರಮಾಣದಲ್ಲಿ ವಾಸಿಸುವ ಲಾಡ್ ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇನ್ನು, ಈ ದಾಳಿಯಲ್ಲಿ ಕೇರಳ ಮೂಲದ ಸೌಮ್ಯ ಸಂತೋಷ್ ಮಡಿದಿದ್ದಾರೆ. ಇಸ್ರೇಲ್ ನ ಅಶ್ಕೆಲೋನ್‌ನಲ್ಲಿ ವೃದ್ಧೆಯೊಬ್ಬರ ಆರೈಕೆಯಲ್ಲಿ ಸೌಮ್ಯ ತೊಡಗಿದ್ದರು. ಸೌಮ್ಯ ಅವರ ಸಾವಿಗೆ ಸಂತಾಪ ಸೂಚಿಸಿರುವ ಇಸ್ರೇಲ್ ಸರ್ಕಾರ ಆಕೆಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷಕ್ಕೆ ತಡೆಯೊಡ್ಡುವ ವಿಶ್ವ ಸಂಸ್ಥೆಯ ಫಲ ಪ್ರಯತ್ನ ನೀಡಿಲ್ಲ. ಇಷ್ಟೆಲ್ಲ ಆತಂಕಗಳ ನಡುವೆ ಇದು ಆರಂಭ ಮಾತ್ರ. ಎಂಥದ್ದೇ ಸನ್ನಿವೇಶ ಬಂದರೂ ಎದುರಿಸಲು ಸಿದ್ಧರಿದ್ದೇವೆ ಗಾಜಾದ ಮೇಲಿನ ದಾಳಿ ಮುಂದುವರೆಯುವುದು ಎಂದು ಇಸ್ರೇಲ್ ಸೇನೆ ಹೇಳಿದೆ. ಅಲ್ಲದೇ, ಇಸ್ರೇಲ್ ಬಯಸುವುದಾದರೆ ಸಂಘರ್ಷ ಮುಂದುವರಿಸಲು ನಾವು ಸಿದ್ಧ ಎಂದು ಹಮಾಸ್ ಬಂಡುಕೋರರು ಹೇಳಿದ್ದಾರೆ. ಕೊರೋನಾ ದಿಂದ ತತ್ತರಿಸಿರುವ ವಿಶ್ವಕ್ಕೆ ಇಸ್ರೇಲ್- ಪ್ಯಾಲೆಸ್ಟೈನ್ ಸಂಘರ್ಷ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಎರಡು ಶತಮಾನದ ಸಂಘರ್ಷ ಆದಷ್ಟು ಬೇಗ ತಣಿಯಲಿ, ಸಂಘರ್ಷ ನಿಲ್ಲಲಿ, ಅಮಾಯಕರ ಹತ್ಯೆ ಕೊನೆಯಾಗಲಿ ಎಂಬುದಷ್ಟೇ ನಮ್ಮ ಆಶಯ. ಈ ಹಿಂಸೆ ಬಿಟ್ಟು ಶಾಂತಿಯಿಂದ ವರ್ತಿಸಿ ಎಂದು ಭಾರತ ಸಲಹೆ ನೀಡಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








