Amazon : ಮೌತ್ವಾಶ್ ಬದಲಾಗಿ Redmi Note10 ಮೊಬೈಲ್ ಪಡೆದ ಗ್ರಾಹಕ..!
ವಿಶ್ವದ E –ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಅಮೆಜಾನ್ ಸಂಸ್ಥೆ ಆನ್ ಲೈನ್ ಪ್ಲಾಟ್ ಫಾರ್ಮ್ ಇತರೇ ಸಂಸ್ಥೆಗಳಿಗೆ ಹೋಲಿಸಿದ್ರೆ ಹೆಚ್ಚು ಸೇಫ್ ಅನ್ನೋ ಭರವಸೆ ಮೂಡಿಸಿದೆ.. ಆದ್ರೆ ಇಂತಹ ಅಮೇಜಾನ್ ನಲ್ಲಿಯೂ ಕೆಲವೊಮ್ಮೆ ಸಾಕಷ್ಟು ಎಡವಟ್ಟುಗಳಾಗಿವೆ.. ಗ್ರಾಹಕರು ಬುಕ್ ಮಾಡೋದೆ ಒಂದು ಡಿಲೆವರಿ ಆಗೋದೇ ಒಂದಾಗುತ್ತೆ.. ಬಟ್ಟೆ, ಆಹಾರ , ಗ್ರಾಸರೀಸ್ , ಗೃಹೋಪಯೋಗಿ ವಸ್ತುಗಳು , ಕಾಸಮೆಟಿಕ್ಸ್ ಇಂದ ಹಿಡಿದು ಪ್ರತಯೊಂದು ವಸ್ತುಗಳು ಅಮೇಜಾನ್ ಮೂಲಕ ಸಿಗುತ್ತೆ..
ಆದ್ರೆ ಕೆಲವೊಮ್ಮೆ ಉದಾಹರಣೆಗೆ ಅನೇಕರು , ಫೋನ್ ಗಳನ್ನ ಬುಕ್ ಮಾಡಿದ್ರೆ, ಅವರಿಗೆ ಫೋನ್ ನ ಬದಲಿಗೆ , ಸೋಪು ಕಲ್ಲುಗಳು ಬಂದಿರುವ ಘಟನೆಗಳು ನಡೆದಿವೆ.. ಆದ್ರೆ ಈ ಬಾರಿ ಕೇಸ್ ಉಲ್ಟಾ ಆಗಿದೆ.. ಹೌದು.. ಈ ಬಾರಿ ಗ್ರಾಹಕ ಎಕ್ಸೈಟ್ ಮೆಂಟ್ ನಲ್ಲಿ ಶಾಕ್ ಆಗುವಂತಾಗಿದೆ..
ನಡೆದಿದ್ದೇನು..?
ಅಂದ್ಹಾಗೆ ಮುಂಬೈ ಮೂಲದ ವ್ಯಕ್ತಿಯೊಬ್ಬ ಅಮೆಜಾನ್ ನಲ್ಲಿ ಮೌತ್ವಾಶ್ ಬುಕ್ ಮಾಡಿದ್ದ. ಆದ್ರೆ ಆತನಿಗೆ ರೆಡ್ಮಿ ನೋಟ್ 10 ಫೋನ್ ಡೆಲಿವರಿಯಾಗಿದೆ. ಈ ಬಗ್ಗೆ ಆತ ಖುದ್ದು, ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾನೆ.
ಲೋಕೇಶ್ ದಾಗಾ ಎಂಬುವವರಿಗೆ ಮೌತ್ವಾಶ್ ಬದಲು ರೆಡ್ಮಿ ನೋಟ್ 10 ಫೋನ್ ಬಂದಿದೆ.. ಅಲ್ದೇ ಈ ಬಗ್ಗೆ ಅಮೆಜಾನ್ ಗೆ ಟ್ಯಾಗ್ ಮಾಡಿದ್ದಾರೆ. ಸ್ಕ್ರೀನ್ ಶಾಟ್ ಶೇರ್ ಮಾಡಿರುವ ದಾಗಾ, ಹಲೋ @ಅಮೆಜಾನ್ ನಾನು ಮೇ 10ರಂದು 396 ರೂ. ಬೆಲೆಯ ನಾಲ್ಕು ಬಾಟಲ್ ಕೋಲ್ಗೇಟ್ ಮೌತ್ವಾಶ್ ಆರ್ಡರ್ ಮಾಡಿದ್ದೇನೆ. ಆರ್ಡರ್ ನಂ. 406-9391383-4717957. ಆದರೆ ನನಗೆ ರೆಡ್ಮಿ ನೋಟ್ 10 ಫೋನ್ ಬಂದಿದೆ. ಮೌತ್ವಾಶ್ ಆಹಾರ ಉತ್ಪನ್ನಗಳ ಪಟ್ಟಿಗೆ ಬರುವುದರಿಂದ ಅದನ್ನು ವಾಪಾಸ್ ಮಾಡಲು ನಿರ್ಬಂಧವಿದೆ. ಹಾಗಾಗಿ ಈ ಆನ್ಲೈನ್ ಮೂಲಕ ನನಗೆ ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಲ್ ಸಮೇತ ಮೇ 13ರಂದು ಟ್ವೀಟ್ ಮಾಡಿದ್ದಾರೆ.
ಇನ್ನು ಒಂದು ಟ್ವೀಟ್ ನಲ್ಲಿ ವಸ್ತುವಿನ ಮೇಲೆ ನಾನು ಆರ್ಡರ್ ಮಾಡಿದ ವಸ್ತುವಿನ ಲೇಬಲ್ ಇದೆ. ಆದರೆ ಪ್ಯಾಕೇಜಿಂಗ್ನಲ್ಲಿ ಬೇರೆ ವಸ್ತುವಿದೆ. ಈ ಉತ್ಪನ್ನದ ನಿಜವಾದ ಮಾಲೀಕನಿಗೆ ತಲುಪಿಸಲು ನಿಮಗೆ ಮೇಲ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇನ್ನೂ ಪ್ಯಾಕ್ ನಲ್ಲಿ ತೆಲಂಗಾಣ ವ್ಯಕ್ತಿಯ ವಿಳಾಸವಿರುವುದು ಗೊತ್ತಾಗಿದೆ. ತೆಲಂಗಾಣ ವ್ಯಕ್ತಿಗೆ ತಲುಪಬೇಕಾದ ವಸ್ತು ಮುಂಬೈ ವ್ಯಕ್ತಿಗೆ ತಲುಪಿದೆ.
ಡಿಲೆವರಿ ವೇಳೆ ವಸ್ತುಗಳ ಆರ್ಡರ್ಗಳನ್ನ ತಲುಪಿಸುವಾಗ ಈ ಎಡವಟ್ಟಾಗಿರಬಹುದು ಎನ್ನಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.