ಮೇ. 26 ರಂದು ಗೋಚರವಾಗಲಿದೆ ‘ಬ್ಲಡ್ ಮೂನ್’ – ವರ್ಷದ ಮೊದಲ ಸಂಪೂರ್ಣ ಚಂದ್ರಗ್ರಹಣದ ವಿಶೇಷತೆಗಳು..!
(2021 ) ಇದೇ ಮೇ 26 ರಂದು ಈ ವರ್ಷದ ಮೊದಲ ಸಂಪೂರ್ಣ ಚಂದ್ರಗ್ರಹಣ ಸಂಭವಿಸಸಲಿದ್ದು, ನಭೋ ಮಂಡಲದಲ್ಲಿ ನಡೆಯುವ ಈ ಕೌತುಕವನ್ನ ಕಣ್ತುಂಬಿಕೊಳ್ಳುವ ಅದೃಷ್ಟ ಅನೇಕ ದೇಶಗಳಿಗಿವೆ.. ವಿಶ್ವದ ಹಲವು ಪ್ರದೇಶಗಳಲ್ಲಿ ಈ ಚಂದ್ರಗ್ರಹಣವನ್ನ ಕಣ್ತುಂಬಿಕೊಳ್ಳಬಹುದಾಗಿ.
ಅತ್ಯಂತ ಸುಂದರವಾದ ಕಾಸ್ಮಿಕ್ ವಿದ್ಯಮಾನವೆಂದು ಪರಿಗಣಿಸಲ್ಪಟ್ಟ ಈ ಸಂಪೂರ್ಣ ಚಂದ್ರ ಗ್ರಹಣವನ್ನು ಬ್ಲಡ್ ಮೂನ್ ಎಂದೂ ಕರೆಯುತ್ತಾರೆ. ನಭೋಮಂಡಲದಲ್ಲಿ ಉಂಟಾಗುವ ಕೌತುಕಗಳಲ್ಲಿ ಬ್ಲಡ್ ಮೂನ್ ಕೂಡಾ ಒಂದಾಗಿದ್ದು, ಈ ವೇಳೆ ಚಂದ್ರ ತಿಳಿ ಕೆಂಪು – ಕೇಸರಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಸೂರ್ಯೋದಯ ಹಾಗೂ ಸೂರ್ಯಾಸ್ತದ ಬೆಳಕು ಚಂದ್ರನ ಮೇಲೆ ಬೀಳೋದ್ರಿಂದ ಚಂದ್ರನ ಬಣ್ಣ ಬದಲಾಗಲಿದೆ. ಧೂಳಿನ ಕಣ ಹಾಗೂ ಯಾವ ತರಂಗಾತರದಲ್ಲಿ ಬೆಳಕು ಚಂದ್ರನ ಮೇಲ್ಮೈಯನ್ನ ತಲುಪಲಿದೆ ಎಂಬುದನ್ನ ಆಧರಿಸಿ ಚಂದ್ರನ ಬಣ್ಣವು ಬದಲಾಗಲಿದೆ.
ಭೂಮಿಯ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಂದ ಚಂದ್ರನ ಮುಖದ ಮೇಲೆ ಚದುರಿದ ಬೆಳಕು ಬೀಳುವುದರಿಂದ ಸ್ವಲ್ಪ ಕೆಂಪು-ಕಿತ್ತಳೆ ಬಣ್ಣದಲ್ಲಿ ಚಂದ್ರ ಕಾಣುತ್ತದೆ. ಈ ವಿದ್ಯಮಾನದ ಸಮಯದಲ್ಲಿ, ಚಂದ್ರನ ಬಣ್ಣವು ಧೂಳಿನ ಕಣಗಳು ಮತ್ತು ಅದರ ಮೇಲ್ಮೈಯನ್ನು ತಲುಪುವ ಬಣ್ಣಗಳ ವಿಭಿನ್ನ ತರಂಗಾಂತರಗಳನ್ನು ಅವಲಂಬಿಸಿರುತ್ತದೆ. ಹೀಗಾಗಿಯೇ ಇದನ್ನ ಬ್ಲಡ್ ಮೂನ್ ಅಥವ ರಕ್ತ ಚಂದಿರ ಅನ್ನಲಾಗುತ್ತೆ.
ಸಂಪೂರ್ಣ ಚಂದ್ರಗ್ರಹಣ ಉಂಟಾದ ಸಂದರ್ಭದಲ್ಲಿ ಭೂಮಿಯು ಸೂರ್ಯ ಹಾಗೂ ಚಂದ್ರನ ನಡುವೆ ಬರಲಿದೆ. ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳೋದನ್ನ ಭೂಮಿ ತಡೆಯುತ್ತದೆ. ಆದರೆ ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ನೇರವಾಗಿ ಬಂದ ಸಂದರ್ಭದಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ನಾಸಾ ನೀಡಿರುವ ಮಾಹಿತಿಯ ಪ್ರಕಾರ ಚಂದ್ರ ಗ್ರಹಣ ಅಥವಾ ಬ್ಲಡ್ ಮೂನ್ ಪ್ರಕ್ರಿಯೆಯಲ್ಲಿ ಸೂರ್ಯನ ಕಿರಣವು ಚಂದ್ರನ ಮೇಲ್ಮೈ ಮೇಲೆ ಬರದಂತೆ ಭೂಮಿಯು ತಡೆಯುತ್ತದೆ.ಈ ವಿದ್ಯಮಾನವು ಹುಣ್ಣಿಮೆ ಸಂದರ್ಭದಲ್ಲಿ ಮಾತ್ರ ಉಂಟಾಗಲಿದೆ. ನೀವು ಬರಿಗಣ್ಣಿನಿಂದ ಈ ಕೌತುಕವನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ನಾಸಾ ನೀಡಿರುವ ಮಾಹಿತಿಯ ಪ್ರಕಾರ ಭೂಮಿಯ ವಾತಾವರಣದ ತುದಿಗಳಿಂದ ಬೆಳಕು ಭೂಮಿಯ ಮೇಲ್ಮೈ ತಲುಪಲಿದೆ. ಭೂಮಿಯ ವಾತಾವರಣದಲ್ಲಿರುವ ಗಾಳಿಯ ಅಣುಗಳು ನೀಲಿ ಬಣ್ಣವನ್ನ ಹರಡುತ್ತವೆ. ಉಳಿದ ಬೆಳಕು ಭೂಮಿಯ ಮೇಲ್ಮೈ ಮೇಲೆ ಬಿದ್ದು ಕೆಂಪು ಬಣ್ಣದಲ್ಲಿ ಪ್ರಕಾಶಿಸಲಿದೆ. ಇದರಿಂದಾಗಿ ಚಂದ್ರ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ.
ಒಟ್ಟು ಚಂದ್ರಗ್ರಹಣದ ಸಮಯದಲ್ಲಿ, ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಇರುತ್ತದೆ ಮತ್ತು ಆದ್ದರಿಂದ ಚಂದ್ರನನ್ನು ಸೂರ್ಯನ ಬೆಳಕಿನಿಂದ ಮರೆಮಾಡುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿಯು ಸರಳ ರೇಖೆಯಲ್ಲಿ ಜೋಡಿಸಿದಾಗ, ಒಟ್ಟು ಚಂದ್ರಗ್ರಹಣಗಳ ವಿದ್ಯಮಾನವು ನಡೆಯುತ್ತದೆ. ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಪ್ರಕಾರ, ಒಟ್ಟು ಚಂದ್ರ ಗ್ರಹಣ ಅಥವಾ ರಕ್ತ ಚಂದ್ರನಲ್ಲಿ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಸೂರ್ಯನು ಕಿರಣಗಳನ್ನು ಚಂದ್ರನನ್ನು ತಲುಪದಂತೆ ಭೂಮಿಯು ತಡೆಯುತ್ತದೆ. ಈ ವಿದ್ಯಮಾನವು ಹುಣ್ಣಿಮೆಯಂದು ಮಾತ್ರ ನಡೆಯುತ್ತದೆ ಮತ್ತು ಸೂರ್ಯಗ್ರಹಣಕ್ಕಿಂತ ಭಿನ್ನವಾಗಿ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು.
ಎಲ್ಲೆಲ್ಲಿ ವೀಕ್ಷಿಸಬಹುದು
ಆಕಾಶವು ಸ್ಪಷ್ಟವಾಗಿದ್ದರೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಪಶ್ಚಿಮ ಅಮೆರಿಕ, ಹಿಂದೂ ಮಹಾಸಾಗರ, ಫೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ ಹಾಗೂ ಆಗ್ನೇಯ ಏಷ್ಯಾದ ವಿವಿಧ ಭಾಗಗಳಲ್ಲಿ ರಕ್ತ ಚಂದಿರ ಗೋಚರಿಸಲಿದೆ.