ವರದಕ್ಷಿಣೆಗಾಗಿ ಮಹಿಳೆಯ ಬಾಯಿಗೆ ಆಸಿಡ್ ಸುರಿದ ಪಾಪಿಗಳು.. ಅಪ್ಪಾ ಎನ್ನುತ್ತಲೇ ನರಳಿ ನರಳಿ ಪ್ರಾಣಬಿಟ್ಟಳು
ಉತ್ತರಪ್ರದೇಶ ಉತ್ತರಪ್ರದೇಶ : ವರದಕ್ಷಿಣೆ ಕೊಡುವುದು ತೆಗೆದುಕೊಳ್ಳುವುದು ಎರೆಡೂ ಕಾನೂನು ಬಾಹಿರ , ಶಿಕ್ಷಾರ್ಹ ಅಪರಾಧವಾಗಿದೆ.. ಆದ್ರೂ ಸಹ ಈ ವರದಕ್ಷಿಣೆ ಪಿಡುಗಿನಿಂದಾಗಿ ಮಹಿಳೆಯರು ಹೆಣ್ಣು ಹೆತ್ತವರು ಸದಾ ಕಷ್ಟಪಡುತ್ತಾರೆ.. ಅದೆಷ್ಟೋ ಜನ ಇದೇ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳೋದು ಒಂದೆಡೆಯಾದ್ರೆ ಗಂಡನ ಮನೆಯವರು ಸಾಯಿಸಿರುವ ಪ್ರಕರಣಗಳು ಮತ್ತೊಂದೆಡೆ.. ಇಂತಹದ್ದೇ ಒಮದು ಪ್ರಕರಣ ಅಪರಾಧಗಳ ಆಗರ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.. ವರದಕ್ಷಿಣೆಗಾಗಿ ಗಂಡನ ಮನೆಯವರು ಮನೆ ಸೊಸೆಯ ಬಾಯಿಗೇ ಆಯಸಿಡ್ ಸುರಿದು ಕ್ರೂರತೆ ಮೆರೆದಿದ್ದಾರೆ.
21 ವರ್ಷದ ಯಶೋಧ ಎಂಬಾಕೆಯನ್ನ ತಂದೆ ಮನೆಯವರು ಸಂಭ್ರಮದಿಂದ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದ್ರೆ ಗಂಡನ ಮನೆಯವರು ಪ್ರತಿನಿತ್ಯ ಯುವತಿಗೆ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಲಾರಂಭಿಸಿದ್ದಾರೆ. ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಆಗಾಗಾ ಪೀಡಿಸಲಾರಂಭಿಸಿದ್ದಾರೆ. ಅದೇ ರೀತಿಯೇ ಇತ್ತೀಚೆಗೆ ಒಂದು ದಿನ ಗಂಡ ಸೇರಿ ಆತನ ಮನೆಯವರೆಲ್ಲರೂ ಸೇರಿಕೊಂಡು ಯಶೋಧಾಳಿಗೆ ಹಿಂಸಿಸಲು ಆರಂಭಿಸಿದ್ದಾರೆ.
ಈ ವೇಳೆ ಮನೆಯವರೆಲ್ಲಾ ಸೇರಿ ಆಕೆಯ ಬಾಯಿಗೆ ಆಸಿಡ್ ಸುರಿದು ಜ್ರೌರ್ಯ ಮೆರೆದಿದ್ದಾರೆ. ಈ ವೇಳೆ ನರಳಾಡುತ್ತಲೇ ತನ್ನ ಅಪ್ಪನಿಗೆ ಕರೆ ಮಾಡಿ ನೋವನ್ನು ತೋಡಿಕೊಂಡಿದ್ದಾಳೆ. ವರದಕ್ಷಿಣೆ ತರದಿದ್ದರೆ ವಿಷ ಕುಡಿ ಎಂದು ಪೀಡಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ. ಈ ವಿಚಾರ ತಿಳಿದ ತಕ್ಷಣ ತಂದೆ ಶರ್ಮಾ ತನ್ನ ಮಗನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅದಾದ ನಂತರ ಮಗಳನ್ನು ನೋಡಲು ಆಕೆಯ ತಂದೆ ಮನೆಗೆ ಬಂದಿದ್ದಾರೆ. ಅಲ್ಲಿನ ಾಕೆಯ ಪರಿಸ್ಥಿತಿ ನೋಡಿ ಅವರಿಗೆ ಬರಸಿಡಿಲು ಬಡಿದಂತಾಗಿದೆ..
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನ ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಮಾರ್ಗ ಮಧ್ಯದಲ್ಲೇ ಆಕೆ ಪ್ರಾಣ ಬಿಟ್ಟಿದ್ದಾಳೆ.. ಇತ್ತ ಆಕೆಯ ಗಂಡನ ಮನೆಯವರು ಪರಾರಿಯಾಗಿದ್ದು, ಮಹಿಳೆಯ ತಂದೆಯ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.