ಆನಂದಯ್ಯ ಆಯುರ್ವೇದ ಔಷಧ ವಿತರಣೆಗೆ ಗ್ರೀನ್ ಸಿಗ್ನಲ್ Anandaya
ಆಂಧ್ರಪ್ರದೇಶ : ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನ ಆನಂದಯ್ಯ ಆಯುರ್ವೇದ ಔಷಧಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್ ಮಹತ್ತರ ತೀರ್ಪು ನೀಡಿದೆ.
ಕೃಷ್ಣಪಟ್ಟಣಂನಲ್ಲಿ ಆನಂದಯ್ಯ ಆಯುರ್ವೇದ ಔಷಧ ವಿತರಣೆಗೆ ಎಪಿ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಆಂಧ್ರ ಪ್ರದೇಶ ಸರ್ಕಾರ ಸಿಸಿಆರ್‍ಎಎಸ್ ಸಮಿತಿಯ ವರದಿಯ ಪ್ರಕಾರ ಆನಂದಯ್ಯ ಔಷಧಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.
ಆದರೆ, ಹೈಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇತ್ತು. ಇಂದು ಹೈ ಕೋರ್ಟ್ ವಿಚಾರಣೆ ನಡೆಸಿ ಔಷಧಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಔಷಧ ವಿತರಿಸಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ.
ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.