ಈ ದೇಶದಲ್ಲಿ ಸಿಗುತ್ತೆ 7 KG ತೂಕದ ಹೂ… ಕರೆನ್ಸಿಯಲ್ಲಿದೆ ಗಣೇಶನ ಚಿತ್ರ…. ಇಂಡೋನೇಷ್ಯಾದ ಇಂಟರೆಸ್ಟಿಂಗ್ ಫ್ಯಾಕ್ಟ್ಸ್..!
7 KG ತೂಕದ ಹೂವನ್ನೂ ಯಾವತ್ತಾದ್ರೂ ನೋಡಿದ್ದೀರಾ… ಅರೆ ಇಂಥ ಹೂವು ನಿಜವಾಗ್ಲೂ ಇರುತ್ತಾ ಅಂತ ಅನೇಕರು ಆಶ್ಚರ್ಯ ಪಡಬಹುದು.. ಆದ್ರೆ ಈ ರೀತಿಯಾದ ಹೂ ಈ ದೇಶದಲ್ಲಿ ಸಿಗುತ್ತೆ… ಸುಂದರ ಸಮುದ್ರ , ಲೆಕ್ಕಕ್ಕೆ ಸಿಗದಷ್ಟು ಐಲ್ಯಾಂಡ್ ಗಳು , ಪ್ರಾಕೃತಿಕ ಸೌಂದರ್ಯದಿಂದ ಈ ದೇಶ ಇಡೀ ವಿಶ್ವಾದ್ಯಂತ ಫೇಮಸ್…
ಇದು ಏಷ್ಯಾದ ದೊಡ್ಡ ದೇಶಗಳಲ್ಲಿ ಒಂದಾದ ಇಂಡೋನೇಷ್ಯಾ.. ಈ ದೇಶದಲ್ಲಿ ಅನೇಕ ವಿಶೇಷತೆಗಳನ್ನ ತಿಳಿದುಕೊಳ್ಳಲೇಬೇಕು..
ಇಂಡೋನೇಷ್ಯಾದ ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಇಂಡೋನೇಷ್ಯಾ
ರಾಜಧಾನಿ – ಜಕಾರ್ತಾ – ಜನಸಂಖ್ಯಾ ವಿಚಾರದಲ್ಲಿ ವಿಶ್ವದ 3ನೇ ಅತಿದೊಡ್ಡ ಸಿಟಿ
ಜನಸಂಖ್ಯಾ ವಿಚಾರದಲ್ಲಿ ಇಂಡೋನೇಷ್ಯಾ , ಏಷ್ಯಾದ 3ನೇ ಹಾಗೂ ವಿಶ್ವದ 4 ನೇ ಅತಿ ದೊಡ್ಡ ದೇಶ. ಮೊದಲನೇ ಸ್ಥಾನದಲ್ಲಿ ಚೈನಾ 2ನೇ ಸ್ತಾನದಲ್ಲಿ ಭಾರತವಿದೆ.
ಇಂಡೋನೇಷ್ಯಾದ ಕರೆನ್ಸಿ ನೋಟಿನ ಮೇಲೆ ಹಿಂದೂ ದೇವರಾದ ಭಗವಾನ್ ಗಣೇಶನ ಚಿತ್ರವಿದೆ.. ವಿಶ್ವದಲ್ಲೇ ಗಣೇಶನ ಚಿತ್ರ ಹೊಂದಿರುವ ಏಕಮಾತ್ರ ಕರೆನ್ಸಿ ಹೊಂದಿರುವ ರಾಷ್ಟ್ರವಿದು. 20,000 ರುಪಿಯಾ ನೋಟಿನ ಮೇಲೆ ಗಣೇಶನ ಫೋಟೋವಿದೆ.
ಈ ದೇಶದ ಒಟ್ಟು ಜನಸಂಖ್ಯೆ ಅಂದಾಜು 27 ಕೋಟಿ
ಸಿಂಗಾಪುರ , ವಿಯೇಟ್ನಂ , ಫಿಲಿಫೈನ್ಸ್ , ಆಸ್ಟ್ರೇಲಿಯಾ , ಭಾರತದ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ ಇಂಡೋನೇಷ್ಯಾದ ನೆರೆ ಹೊರೆ ರಾಷ್ಟ್ರಗಳಾಗಿವೆ.
ಇಂಡೋನೇಷ್ಯಾದ ಪ್ರಮುಖ ಭಾಷೆ – ಭಾಸಾ , 700 ಕ್ಕೂ ಹೆಚ್ಚು ಬಾಷೆಗಳನ್ನ ಿಲ್ಲಿನ ಜನ ಮಾತನಾಡ್ತಾರೆ.
ಇಂಡೋನೇಷ್ಯಾ ಇಸ್ಲಾಮಿಕ್ ದೇಶವಾಗಿದೆ. (ಸುಮಾರು 18% ಜನಸಂಖ್ಯೆ ಮುಸ್ಲಿಂ)
ಇಡೀ ವಿಶ್ವದಲ್ಲಿನ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯಾ ರಾಷ್ಟ್ರವೂ ಹೌದು.. ಈ ವಿಚಾರದಲ್ಲಿ 2ನೇ ಸ್ತಾನದಲ್ಲಿ ಪಾಕಿಸ್ತಾನ 3ನೇ ಸ್ಥಾನದಲ್ಲಿ ಭಾರತ.
ಇಂಡೋನೇಷ್ಯಾದಲ್ಲಿನ ಒಟ್ಟಾರೆ ಜನಸಂಖ್ಯೆಯಲ್ಲಿ 17 % ಜನರ ವಯಸ್ಸು 30 ವರ್ಷಗಳಿಗಿಂತಲೂ ಕಡಿಮೆಯಿದೆ.
ವಿಶ್ವದ ಅತ್ಯಂತ ದೊಡ್ಡ ಚಿನ್ನದ ಗಣಿ ಇರುವುದು ಇಂಡೋನೇಷ್ಯಾದಲ್ಲಿ – ಗ್ರಾಸ್ ಬರ್ಗ್ ಮೈನ್
ವಿಶ್ವದ 2ನೇ ಅತಿ ದೊಡ್ಡ ಕಾಪರ್ ಮೈನ್ ಇರುವುದು ಇಲ್ಲಿಯೇ…
ಲೇಕ್ ತೋಬಾ- ಏನಿದು ಲೇಕ್ ತೋಬಾ…? – ಲೇಕ್ ತೋಬಾ.. ಇದು ವಿಶ್ವದ ಅತಿ ದೊಡ್ಡ ಜ್ವಾಲಾಮುಖಿಯಿಂದ ಕೂಡಿರುವ ಝರಿ
ತೋಬಾ ಜ್ವಾಲಾಮುಖಿ / ವಾಲ್ಕಾನೋವನ್ನ ಇಡೀ ವಿಶ್ವದಲ್ಲಿ ಅತಿ ಅಪಾಯಕಾರಿ ವಾಲ್ಕೋನೋ ಎಂದು ಪರಿಗಣಿಸಲಾಗುತ್ತೆ.
ದ್ವೀಪಗಳ ಸಮೂಹ – ವಿಶ್ವದ ಅತಿ ಹೆಚ್ಚು ದ್ವೀಪಗಳು ಇಂಡೋನೇಷ್ಯಾದಲ್ಲಿದೆ.. ಸುಮಾರು 18 ಸಾವಿರ ದ್ವೀಪಗಳನ್ನ ತನ್ನೊಡಲ್ಲಿರಿಸಿಕೊಂಡಿದೆ ಇಂಡೋನೇಷ್ಯಾ – ಆದ್ರೆ ಸುಮಾರು 90 % ರಷ್ಟು ದ್ವೀಪಗಳಗಳಲ್ಲಿ ಯಾರೊಬ್ಬರು ಜನರು ಕಾಣಿಸುವುದಿಲ್ಲ. ಯಾಕಂದ್ರೆ ಈ ಐಲ್ಯಾಂಡ್ ಗಳಲ್ಲಿ ಭೂತ – ಪ್ರೇತಗಳ ವಾಸವಿದೆ ಎಂಬುದು ಎಲ್ಲಿನ ಬಹುತೇಕ ಜನರ ನಂಬಿಕೆ.
7 KG ತೂಕದ ಹೂವು – ರಫ್ಲೇಸಿಯಾ ಅರನೋಲ್ಡಿ ಹೂ.. ಈ ಹೂ ತುಂಬಾ ವಿಭಿನ್ನವಾಗಿದ್ದು, ಕೇವಲ ಇಂಡೋನೇಷ್ಯಾದಲ್ಲಿ ಮಾತ್ರ ಸಿಗುತ್ತೆ. ಅದ್ರಲ್ಲೂ ಸುಮಾತ್ರಾ ಐಲೆಂಡ್ ಒಂದರಲ್ಲಿ ಮಾತ್ರ ಈ ಹೂ ಕಾಣಸಿಗುತ್ತದೆ.
ವಿಶ್ವದ ಅತಿ ದೊಡ್ಡ ಹಲ್ಲಿ / ಕೊಮೊಡೋ ಡ್ರ್ಯಾಗನ್ / ಉಡ ಹೆಚ್ಚಾಗಿ ಈ ದೇಶದ ಅನೇಕ ದ್ವೀಪಗಳಲ್ಲಿ ಕಾಣಿಸಿಕೊಳ್ಳುತ್ತವೆ.
ವಿಶ್ವದ ಅತಿ ದೊಡ್ಡ ಬುದ್ಧನ ಮಂದಿರವಿರುವುದು ಇಂಡೋನೇಷ್ಯಾದಲ್ಲಿಯೇ – ಈ ಮಂದಿರಲ್ಲಿ ಸುಮಾರು ಬುದ್ಧನ ಪ್ರತಿಮೆಗಳಿವೆ.
ಡಿವೆಲ್ಸ್ ಟಂಗ್ … ಇಂಡೋನೇಷ್ಯಾದಲ್ಲಿ ಸಿಗುವ ವಿಭಣಿನ್ನವಾದ ಹೂ. ಇಂಡೋನೇಷ್ಯಾದಲ್ಲಿ ಈ ಹೂವನ್ನ ಅಮೋರ್ ಫೊಪಾಲಸ್ ಟಿಟಾನಮ್ ಎನ್ನಲಾಗುತ್ತೆ. ಈ ಹೂ 2 ಮೀಟರ್ ಉದ್ದದ ವರೆಗೂ ಬೆಳೆಯುತ್ತೆ .. ಇದರ ಸುಗಂಧ 500 ಮೀಟರ್ ದೂರದ ವರೆಗೂ ಪಸರಿಸುತ್ತದೆ.
ಇಂಡೋನೇಷ್ಯಾದಲ್ಲಿ ಕೇವಲ ಸುಂದರ ಯುವತಿಯರಿಗೆ ಮಾತ್ರವೇ ಪೊಲೀಸ್ ಕೆಲಸ ಸಿಗುತ್ತದೆ.
2004 ರಲ್ಲಿ ಇಂಡೋನೇಷ್ಯಾದಲ್ಲಿ ಅಪ್ಪಳಿಸಿದ್ದ ಸುಮಾನಿಯನ್ನ ಇಡೀ ವಿಶ್ವದ ಅತಿ ದೊಡ್ಡ ಹಾಗೂ ಭಯಾನಕ ನೈಸರ್ಗಿಕ ವಿಕೋಪಕ್ಕೆ ಹೋಲಿಕೆ ಮಾಡಲಿಗಿದೆ.. ಈ ಸುಮಾನಿಯಲ್ಲಿ ಸುಮಾರು 2.30 ಲಕ್ಷ ಮಂದಿ ಮೃತಪಟ್ಟಿದ್ದರು.. ದೇಶಕ್ಕೆ ಅತಿ ಹೆಚ್ಚು ನಷ್ಟವೂ ಆಗಿತ್ತು.
ಇಂಡೋನೇಷ್ಯಾದಲ್ಲಿ 400 ಕ್ಕೂ ಹೆಚ್ಚು ಆಕ್ಟೀವ್ ಜ್ವಾಲಾಮುಖಿಗಳಿವೆ. ಇಂಡೋನೇಷ್ಯಾದಲ್ಲಿ ಪ್ರತಿ ದಿನ ಸುಮಾರು 3 ಭೂಕಂಪನ ವರದಿಯಾಗುತ್ತೆ.
ಮೂಡನಂಬಿಕೆ ವಿಚಾರದಲ್ಲೂ ಈ ದೇಶದ ಜನರು ಹಿಂದೆ ಬಿಂದಿಲ್ಲ..
ವಿದೇಶ ಪ್ರವಾಸ ಕೈಗೊಳ್ಳುವ ಇಚ್ಛೆಯಿರುವ ಬಾರತೀಯರಿಗೆ ಇಂಡೋನೇಷ್ಯಾ ಬಜೆಟ್ ಫ್ರೆಂಡ್ಲಿ ದೇಶ – ಇನ್ನೊಂದು ವಿಶೇಷತೆ ಎಂದ್ರೆ ಇಲ್ಲಿಗೆ ಪ್ರವಾಸ ಕೈಗೊಳ್ಳಲು ವಿಸಾದ ಅಗತ್ಯತೆಯೂ ಇಲ್ಲ. ವೀಸಾ ಇಲ್ಲದೇ ಭಾರತೀಯರು 30 ದಿನಗಳ ವರೆಗೂ ಸುತ್ತಾಡಬಹುದು.
ಪ್ರಸಿದ್ಧ ಪ್ರವಾಸಿ ತಾಣಗಳು
ಬಾಲಿ ಐಲ್ಯಾಂಡ್ – ಅತಿ ಸುಂದರವಾದ ರಮಣೀಯವಾದ ತಾಣ
ಜಕಾರ್ತಾ , ಬಾಟಮ್ , ಗಿಲಿ ಐಲ್ಯಾಂಡ್ , ರಾಜಾ ಅಂಪೇಟ್ ಐಲ್ಯಾಂಡ್ , ಲಾಬೋಂಕ್ ಐಲ್ಯಾಂಡ್ , ಮೌಂಟ್ ಬ್ರೂಮೋ, ಬೋರೋಬುದಿರ್ ದೇವಾಲಯ , ಬ್ರಿತುರ್ ಹಮಾನ್ ಮಸೀದಿ , ಟನಾ ತೊರಾಜಾ