ಪಾಕಿಸ್ತಾನೀಯರಿಗೆ ಶಾಕ್ ಕೊಟ್ಟ ಸೌದಿ – ಚೀನಾ ಲಸಿಕೆ ಪಡೆದವರಿಗೆ ನಿರ್ಬಂಧ..!
ಪಾಕಿಸ್ತಾನ : ಕಪಟಿ ಚೀನಾದ ಅಪ್ಪಟ ಮಿತ್ರ ರಾಷ್ಟ್ರವಾದ ಉಗ್ರರ ತವರು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಬಿಗ್ ಶಾಕ್ ನಿಡಿದೆ.. ಹೌದು ಚೀನಾದ ಕೊರೊನಾ ಲಸಿಕೆ ಪಡೆದ ನಾಗರಿಕರಿಗೆ ತಮ್ಮ ದೇಶಕ್ಕೆ ಪ್ರವೇಶ ನಿರಾಕರಿಸಿದೆ. ಹೀಗೆ ಸೌದಿಗೆ ಹೆಚ್ಚು ಓಡಾಟ ನಡೆಸುವ ಪಾಕಿಸ್ತಾನಿಯರಿಗೆ ಇದ್ರಿಂದಾಗಿ ಆತಂಕ ಎದುರಾಗಿದೆ.
ಸೌದಿ ಅರೇಬಿಯಾದ ಈ ನಿರ್ಧಾರದಿಂದ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು, ಪವಿತ್ರ ಹಜ್ ಯಾತ್ರೆಗೆ ತೆರಳುವ ಮಂದಿಗೆ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಆದ್ಯತೆಯ ಆಧಾರದಲ್ಲಿ ಈ ಮಂದಿಗೆ ಫೈಝರ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಚೀನಾ ಅಭಿವೃದ್ಧಿ ಪಡಿಸಿದ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ನೋಂದಾಯಿತವಾಗಿದ್ದರೂ ಸೌದಿ ಅರೇಬಿಯಾ ಈ ಲಸಿಕೆಗಳನ್ನು ಪಡೆದವರಿಗೆ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.
ಚೀನಾದ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದರೂ ಅದರ ಪರಿಣಾಮಕಾರಿತ್ವದ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಏಪ್ರಿಲ್ನಲ್ಲಿ ಚೀನಾದ ರೋಗ ನಿಯಂತ್ರಣ ಸಂಸ್ಥೆ ಚೀನಾ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆ ಪರಿಣಾಕಾರಿಯಲ್ಲ. ಲಸಿಕೆಗೆ ಕೆಲ ಸುಧಾರಣೆಯ ಅಗತ್ಯವಿದೆ ಎಂದು ಹೇಳಿತ್ತು.
ಮಧ್ಯಪ್ರಾಚ್ಯದ ಕೆಲ ರಾಷ್ಟ್ರಗಳು ಚೀನಾದ ಲಸಿಕೆಯನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ನಾವು ಬೇರೆ ಲಸಿಕೆಯನ್ನು ಜನರಿಗೆ ನೀಡಬೇಕು ಎಂದು ಶೇಖ್ ರಶೀದ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಳಿ ಹೇಳಿದ್ದಾರೆ. ಫೈಝರ್, ಅಸ್ಟ್ರಾಜೆನೆಕಾ, ಮಾಡೆರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಕಂಪನಿ ತಯಾರಿಸಿದ ಲಸಿಕೆಯನ್ನು ಪಡೆದವರಿಗೆ ಪ್ರವೇಶ ನೀಡುವುದಾಗಿ ಸೌದಿ ಅರೇಬಿಯಾ ಹೇಳಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.