ಟ್ವಿಟ್ಟರ್ ನಲ್ಲಿ #Boycott Kareena Kapoor ಟ್ರೆಂಡಿಂಗ್ – ಸೀತೆ ಪಾತ್ರಕ್ಕೆ ಕರೀನಾ ಅರ್ಹರಲ್ಲ… ಕಂಗನಾ ಬೆಸ್ಟ್..!
ಬಾಲಿವುಡ್ ನ ಸ್ಟಾರ್ ನಟಿ ಕರೀನಾ ಕಪೂರ್ ಖಾನ್ ವಿರುದ್ಧ ಇದೀಗ ನೆಟ್ಟಿಗರ ಆಕ್ರೋಶ ಭುಗಿಲೆದ್ದಿದೆ. ಟ್ವಿಟ್ಟರ್ ನಲ್ಲಿ #Boycott Kareena Kapoor ಟ್ರೆಂಡ್ ಆಗ್ತಿದೆ. ಕರೀನಾ ಬಹಿಷ್ಕಾರಕ್ಕೆ ನೆಟ್ಟಿಗರು ಒತ್ತಾಯಿಸುತ್ತಾ ಹೊಸ ಅಭಿಯಾನ ಶುರುಮಾಡಿದ್ದಾರೆ..
ಅಷ್ಟಕ್ಕೂ ಇದಕ್ಕೆಲ್ಲಾ ಕಾರಣವಾದ್ರೂ ಏನು..?
ಎಲ್ರಿಗೂ ಗೊತ್ತಿರುವ ಹಾಗೆ ಕೆಲ ದಿನಗಳಿಂದಲೂ ಬಾಲಿವುಡ್ ನಲ್ಲಿ ರಾಮಾಯಣ ಕಥೆಯಾಧಾರಿತ ‘ಸೀತಾ’ ಸಿನಿಮಾ ಮೂಡಿಬರುತ್ತಿದ್ದು, ಈ ಸಿನಿಮಾದಲ್ಲಿ ಕರೀನಾ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಆದ್ರೆ ಇದೀಗ ಸೀತೆ ಪಾತ್ರಕ್ಕಾಗಿ ಕರೀನಾ ಬರೋಬ್ಬರಿ 12 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗ್ತಿದೆ.. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಕರೀನಾ ವಿರುದ್ಧ ನೆಟ್ಟಿಗರು ಕೆಂಡಕಾರುತ್ತಿದ್ದಾರೆ..
ಅಲ್ಲದೇ ಬಾಯ್ಕಟ್ ಕರೀನಾ ಟ್ರೆಂಡ್ ಆಗಿದ್ದು, ಬಹಿಷ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.. ಜೊತೆಗೆ ಕರೀನಾ ತಾಯಿ ಸೀತಾ ದೇವಿ ಪಾತ್ರ ನಿರ್ವಹಿಸಲು ಅರ್ಹರಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಇದರ ಜೊತೆಗೆ ಟ್ರೋಲ್ , ಮೀಮ್ಸ್ ಗಳು ಹರಿದಾಡ್ತಿವೆ.. ಅದ್ರಲ್ಲಿ ಕರೀನಾ ಧೂಮಪಾನ ಮಾಡುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗ್ತಿವೆ.
ತೆಲುಗಿನ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಅವರ ರಾಮಾಯಣ ಆಧಾರಿತ ‘ಸೀತಾ’ ಸಿನಿಮಾದಲ್ಲಿ ನಟಿಸಲು ಕರೀನಾಗೆ ಆಫರ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದೇ ಸಿನಿಮಾಗೆ ಕರೀನಾ 12 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.. ಭಾರತದ ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾದಲ್ಲಿ ನಟಿಸಲು ಕರೀನಾ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಕೇಳಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾದಿಂದ ಬಹಿಷ್ಕರಿಸುವಂತೆ ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ.
ಅಲ್ಲದೇ ಹಿಂದೂಗಳೇ ಸೀತೆ ಪಾತ್ರ ಮಾಡಬೇಕು , ಡ್ರಗ್ ಅಡಿಕ್ಟ್ಸ್ ಈ ಪಾತ್ರ ನಿರ್ವಹಿಸಬಾರದು , ತೈಮೂರ್ ಅಲಿ ಖಾನ್ ತಾಯಿ ಕರೀನಾ ಈ ಪಾತ್ರ ಮಾಡಬಾರದು ಎಂದೆಲ್ಲಾ ನೆಟ್ಟಿಗರು ಕಿಡಿಕಾರ್ತಿದ್ದಾರೆ. ಸೀತೆ ಪಾತ್ರಕ್ಕೆ 12 ಕೋಟಿ ರೂ. ಕೇಳುವ ಮೂಲಕ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ ಎಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಹಿಂದೂ ದೇವರನ್ನು ಅಗೌರವಿಸುವ ನಟಿ ಈ ಪಾತ್ರವನ್ನು ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕರೀನಾ ಕಪೂರ್ ಸೀತೆ ಪಾತ್ರವನ್ನು ಮಾಡಲು ಅರ್ಹರಲ್ಲ, ಕರೀನಾರನ್ನು ಬಹಿಷ್ಕರಿಸಿ ಎಂದು ಟ್ವೀಟ್ ಮಾಡುವ ಮೂಲಕ ಟ್ರೆಂಡ್ ಮಾಡುತ್ತಿದ್ದಾರೆ. ಅಲ್ಲದೇ ಈ ಪಾತ್ರಕ್ಕೆ ಕಂಗನಾರನ್ನ ಆಯ್ಕೆ ಮಾಡುವಂತೆ ಹಲವರು ಸಲಹೆಗಳನ್ನ ನೀಡಿದ್ದಾರೆ.