ಶಿರಸಿಯ ಜಾಜಿ ಗುಡ್ಡದಲ್ಲಿ ಭೂ ಕುಸಿತ
ಕಾರವಾರ : ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ಶಿರಸಿ ತಾಲೂಕಿನ ಜಾಜಿ ಗುಡ್ಡದಲ್ಲಿ ಭೂ ಕುಸಿತ ಉಂಟಾಗಿದೆ.
ಹೀಗಾಗಿ ಜಾಜಿಗುಡ್ಡ ಗ್ರಾಮದ 7 ಮನೆಗಳ ಜನರನ್ನು ಸ್ಥಳಾಂತರಿಸಲು ಶಿರಸಿ ತಹಶಿಲ್ದಾರ್ ಎಂ.ಆರ್.ಕುಲಕರ್ಣಿ ಆದೇಶ ನೀಡಿದ್ದಾರೆ.
ಇದಲ್ಲದೆ ಶಿರಸಿಯ ಹುಣಸೆ ಕೊಪ್ಪದಲ್ಲಿ ಸಹ ಭೂ ಕುಸಿತದಿಂದ ಬುಧವಾರ ಮಂಜುನಾಥ್ ಗಣಪ ಗೌಡ ಅವರು ಮೃತಪಟ್ಟಿದ್ದರು.
ಇದರ ಬೆನ್ನಲೆ ಇದೀಗ ಜಾಜಿ ಗುಡ್ಡದಲ್ಲಿ ಭೂಕುಸಿತವಾಗಿರುವುದು ಜನರದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇತ್ತ ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು, ಈ ತಿಂಗಳ 18ರ ವರೆಗೂ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರಿ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.