ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆ chikkodi
ಚಿಕ್ಕೋಡಿ : ಪತ್ನಿ ಸಾವಿನಿಂದ ಮನನೊಂದು ಪತಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಹೃದಯಾಘಾತದಿಂದ ಕಳೆದ ಒಂದು ವಾರದ ಹಿಂದೆ ಚನ್ನವ್ವ ರಂಗಾಪುರೆ(40) ಸಾವನ್ನಪ್ಪಿದ್ದರು.
ಇದರಿಂದ ಮನನೊಂದು ಇಂದು ನೇಣು ಬಿಗಿದು ಪತಿ ಕಾಡಪ್ಪ(47) ಕೀರ್ತಿ(20) ಸ್ಪೂರ್ತಿ(18) ಸಾವನ್ನಪ್ಪಿದ್ದಾರೆ.
ಈ ಘಟನೆಯಿಂದ ಪೆÇಗತ್ಯಾನಟ್ಟಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಚಿಕ್ಕೋಡಿ ಪೆÇಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









