ಯುವ ನಿರ್ದೇಶಕನ ಜೊತೆಗೆ ಹೊಸ ಸಿನಿಮಾಗೆ ಸಹಿ ಮಾಡಿದ ನಿಖಿಲ್ ಕುಮಾರಸ್ವಾಮಿ..!
ಸ್ಯಾಂಡಲ್ ವುಡ್ ನ ಯುವ ನಟ ನಿಖಿಲ್ ಕುಮಾರಸ್ವಾಮಿ ಸದ್ಯ ಸ್ಯಾಂಡಲ್ ವುಡ್ ಗೆ ಜಾಗ್ವಾರ್ ಸಿನಿಮಾದ ಮೂಲಕ ಎಂಟ್ರಿ ಪಡೆದು , ಸೀತಾರಾಮ ಕಲ್ಯಾಣ , ಕುರುಕ್ಷೇತ್ರದಂತಹ ಸಿನಿಮಾಗಳಲ್ಲಿ ನಟಿಸಿ ತಮ್ಮ ಅಧ್ಬುತ ನಟನೆಯಿಂದ ಅಭಿಮಾನಿಗಳನ್ನ ರಂಜಿಸಿದ್ದಾರೆ.. ಸದ್ಯ ಅವರು ಬಹುನಿರೀಕ್ಷೆಯ ರೈಡರ್ ಸಿನಿಮಾದಲ್ಲಿ ಬ್ಯುಸಿಯಾಗ್ತಿದ್ದಾರೆ.. ಈ ಸಿನಿಮಾ ರಿಲೀಸ್ ಗೂ ಮುನ್ನವೇ ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಹೌದು.. ನಿಖಿಲ್ ಕುಮಾರ್ ಸದ್ಯ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ನಿಖಿಲ್ ಕುಮಾರ್ ಪತ್ನಿ ರೇವತಿ ಹುಟ್ಟುಹಬ್ಬದ ದಿನ ಗರ್ಭಿಣಿ ಎನ್ನುವ ವಿಚಾರ ಬಹಿರಂಗವಾಗಿದೆ. ಇದೇ ಸಂತಸದಲ್ಲಿ ನಿಖಿಲ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯುವ ನಿರ್ದೇಶಕ ಮಂಜು ಅಥರ್ವ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾದಲ್ಲಿ ನಿಖಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಮಂಜುಗೆ ಇದು ಚೊಚ್ಚಲ ಸಿನಿಮಾವಾಗಿದೆ.. ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.. ಆದ್ರೆ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಬಂಡವಾಳ ಹೂಡುತ್ತಿರೋದು ಖಚಿತವಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಸಿನಿಮಾ ತಂಡ ಆಗಸ್ಟ್ ತಿಂಗಳಿಂದ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.