“ಪುರುಷರು 10 ಮದುವೆಯಾಗಬಹುದು, ಮಹಿಳೆಯರು 2ನೇ ಮದುವೆಯಾದ್ರೆ ತಪ್ಪಾ..?”
ಶಿಫಾಲಿ ಜರಿವಾಲಾ.. ಬಾಲಿವುಡ್ ನ ಹಾಟ್ ಅಂಡ್ ಗ್ಲಾಮರಸ್ ಬೆಡಗಿ… ಈ ಹೆಸರು ಕೇಳ್ತಿದ್ದಂತೆ ಕನ್ನಡದವರಿಗೆ ಥಟ್ ಅಂತ ಹುಡುಗರು ಸಿನೆಮಾ ನೆನಪಾಗುತ್ತೆ.. ಹೌದು.. ಈ ಸಿನಿಮಾದಲ್ಲಿ ಪಂಕಜ ಸಾಂಗ್ ಗೆ ಸಖ್ಖತ್ ಸ್ಟೆಪ್ಸ್ ಹಾಕಿ ಪಡ್ಡೆ ಹೈಕ್ಳ ಹಾರ್ಟ್ ಗೆ ಕೊಳ್ಳಿ ಇಟ್ಟಿದ್ದವರು ಶಿಫಾಲಿ…
ಸದ್ಯ ಬಾಲಿವುಡ್, ಕಿರುತೆರೆ ಸೇರಿದಂತೆ ಆಲ್ಬಂ ಸಾಂಗ್ ಗಳಲ್ಲಿ ಶಿಪಾಲಿ ಬ್ಯುಸಿಯಾಗಿದ್ದಾರೆ.. ಆದ್ರೆ ಅವರ ಕಾಸಗಿ ಬದುಕು ಸಿನಿಮಾದಷ್ಟೇ ಕಲರ್ ಫುಲ್ ಆಗಿಲ್ಲ.. ಶಿಫಾಲಿ ರಿಯಾಲಿಟಿ ಶೋಗಳಲ್ಲಿ ನಟಿಸಿ , ಸ್ಟೇಜ್ ಮೇಲೆ ತಮ್ಮ ಚಾರ್ಮ್ ನಿಂದ ಜನರ ಮನಗೆದ್ದಿದ್ದಾರೆ.. ಶಿಫಾಲಿ ಮೊದಲನೇ ಮದುವೆ ಮುರಿದುಬಿದ್ದಿತ್ತು.. 2004ರಲ್ಲಿ 21 ವರ್ಷದವರಾಗಿದ್ದಾಗ ಶಿಫಾಲಿ ಹರ್ಮಿತ್ ಸಿಂಗ್ ಅವರನ್ನ ಮದುವೆಯಾಗಿದ್ದರು.. ಆದ್ರೆ ಮನಸ್ಥಾಪಗಳಿಂದಾಗಿ 2009ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.. ಬಳಿಕ 2014ರಲ್ಲಿ ಪರಾಗ್ ತ್ಯಾಗಿ ಅವರನ್ನ ಮದುವೆಯಾದ್ರು. ಈಗ ಇಬ್ಬರೂ ಮುಂಬೈನಲ್ಲಿ ವಾಸವಾಗಿದ್ದಾರೆ..
ಇತ್ತೀಚೆಗೆ ಸಂದರ್ಶನದಲ್ಲಿ ಒಮದರಲ್ಲಿ ಪುರುಷರು , ಮಹಿಳೆಯರಿಗೆ ಸಮಾಜದಲ್ಲಿ ಆಗುವ ಬೇಧಭಾವದ ಬಗ್ಗೆ , ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ಮೊದಲ ಬಾರಿಗೆ ಡಿವೋರ್ಸ್ ಪಡೆದಾಗ ಜನರು ನನ್ನದೇ ತಪ್ಪು ಇರಬೇಕು ಎಂದು ಮಾತನಾಡಿದರು. ಇವಳು ಸಿನಿಮಾದಲ್ಲಿ ಹಸಿಬಿಸಿಯಾಗಿ ನಟಿಸುತ್ತಾಳೆ, ಇವಳದೇ ತಪ್ಪು ಇರಬೇಕು ಎಂದು ನನ್ನನ್ನೇ ಆರೋಪಿ ಸ್ಥಾನದಲ್ಲಿ ನೋಡಿದರು, ಟೀಕೆಗಳನ್ನ ಮಾಡಿದರು..
2ನೇ ಮದುವೆಯಾದಗಲೂ ಜನರು ನನ್ನ ಬಗ್ಗೆ ನೆಗೆಟಿವ್ ಆಗಿ ಮಾತುಗಳನ್ನು ಆಡಿದರು. ಆದ್ರೆ ನನ್ನ ಕುಟುಂಬ ಮತ್ತು ಸ್ನೇಹಿತರು ನನಗೆ ಬೆಂಬಲ ನೀಡಿ ಧೈರ್ಯ ತುಂಬಿದ್ದರು ಎಂದಿದ್ದಾರೆ.. ಅಲ್ಲದೇ ‘ಪುರುಷರು 10 ಮದುವೆಯಾಗಬಹುದು , ಆದರೆ ಮಹಿಳೆಯರು 2ನೇ ಮದುವೆಯಾದರೇ ಸಾಕು ಅವರನ್ನು ಈ ಸಾಮಾಜ ಕೀಳಾಗಿ ನೋಡುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.








