ಆನೇಕಲ್ : ಬರ್ಬರವಾಗಿ ಕೊಚ್ಚಿ ಯುವಕನ ಕೊಲೆ murder
ಬೆಂಗಳೂರು : ಮಾರಕಾಸ್ತ್ರಗಳಿಂದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಆನೇಕಲ್ ಗಡಿಭಾಗದಲ್ಲಿರುವ ಗುಮ್ಮಳಾಪುರದಲ್ಲಿ ನಡೆದಿದೆ.
ಗುಮ್ಮಳಾಪುರದ ನಿವಾಸಿ 29 ವರ್ಷದ ಉದಯ್ ಕೊಲೆಯಾದ ಯುವಕನಾಗಿದ್ದಾನೆ.
ಬೈಕ್ ನಲ್ಲಿ ಬಂದ ಅಪರಿಚಿತರು ಉದಯ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈತ ವಾರದ ಹಿಂದೆ ಕುಡಿದ ಮತ್ತಿನಲ್ಲಿ ಸ್ಥಳೀಯ ಯುವಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಅದೇ ದ್ವೇಷದಿಂದ ಕೊಲೆಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









