ಬೇಟೆಗಾರರ ಕ್ರೂರತ್ವ.. ಕಡಲೆಲ್ಲಾ ರಕ್ತಸಿಕ್ತ
ಸಂಪ್ರದಾಯದ ಹೆಸರಲ್ಲಿರುವ ಮೂಢನಂಬಿಕೆ ಮನುಷ್ಯನನ್ನ ಹುಚ್ಚನಾಗಿಸುತ್ತಿದೆ. ಮನುಷ್ಯರಿಗೂ ಮುನ್ನ ಈ ಭೂಮಿ ಮೇಲೆ ಪ್ರಾಣಿಗಳು ವಾಸಿಸುತ್ತಿದ್ದವು ಎಂದು ಸೈನ್ಸ್ ಹೇಳುತ್ತದೆ. ಆದ್ರೆ ಭೂಮಿ ಸೃಷ್ಟಿಯ ನಂತರ ಜನಿಸಿದ ಹೆಚ್ಚಿನ ಪ್ರಾಣಿಗಳು ಈಗಿಲ್ಲ. ಈ ಆಧುನಿಕಯುಗದಲ್ಲಿ ನಮಗೆ ತಿಳಿದಿರುವ ಅನೇಕ ಜಂತುಗಳು ಕಣ್ಮರೆಯಾಗುತ್ತಿವೆ. ಹಿಂದೆ, ವನ್ಯಜೀವಿಗಳನ್ನು ವಿವಿಧ ಕಾರಣಗಳಿಗಾಗಿ ಬೇಟೆಯಾಡುತ್ತಿದ್ದರು. ಕೆಲವರು ತಮ್ಮ ಶೌರ್ಯ ಮತ್ತು ಸಾಮಥ್ರ್ಯ ಸಾಬೀತುಪಡಿಸಲು ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುತ್ತಿದ್ದರು.
ಆದ್ರೆ ಇದೀಗ ಫಾರೋ ದ್ವೀಪಗಳಲ್ಲಿನ ಬೇಟೆಗಾರರು 175 ಕ್ಕೂ ಹೆಚ್ಚು ತಿಮಿಂಗಿಲಗಳನ್ನು ಬೇಟಿಯಾಡಿ ಕೊಂದಿದ್ದಾರೆ.

ಈ ಘಟನೆ ಭಾನುವಾರ ಗ್ರೋಸ್ಡ್ರಾಪ್ ಅಥವಾ ಗ್ರೈಂಡ್ ಇನ್ ಫ್ರೊಸ್ ಎಂಬ ದ್ವೀಪದಲ್ಲಿ ನಡೆದಿದೆ. ಸುಮಾರು 20 ದೋಣಿಗಳಲ್ಲಿ ಆಗಮಿಸಿದ ಬೇಟೆಗಾರರು ತಿಮಿಂಗಿಲಗಳನ್ನು ಕೊಕ್ಕೆ, ಕತ್ತಿ ಮತ್ತು ಈಟಿಗಳಿಂದ ವಿವೇಚನೆಯಿಲ್ಲದೆ ಹಲ್ಲೆ ಮಾಡಿ ಕೊಂದಿದ್ದಾರೆ. ಸಮುದ್ರ ತೀರ ಪ್ರಾಂತ್ಯದಲ್ಲಿ ಒಂದು ಕಡೆ 52 ಪೈಲಟ್ ತಿಮಿಂಗಿಲಗಳನ್ನು ಕೊಂದಿದ್ದು, ಇನ್ನೂ 123 ತಿಮಿಂಗಿಲಗಳನ್ನು ಹಲವು ಕಡೆ ಸಾಯಿಸಿದ್ದಾರೆ. ಇದರಿಂದ ಇಡೀ ಕರಾವಳಿಯಲ್ಲಿ ರಕ್ತಸಿಕ್ತವಾಗಿದೆ. ಈ ವಿಧವಾಗಿ ಕಳೆದ ಒಂದು ದಶಕದಲ್ಲಿ 6,500 ಕ್ಕೂ ಹೆಚ್ಚು ತಿಮಿಂಗಿಲಗಳನ್ನು ಮತ್ತು ಡಾಲ್ಫಿನ್‍ಗಳನ್ನು ಬಲಿತೆಗೆದುಕೊಂಡಿದ್ದಾರೆ. ಸೀ ಶೆಫರ್ಡ್ ಇದನ್ನು ಅನಾಗರಿಕ ಕ್ರಿಯೆ ಎಂದು ಕರೆದಿದೆ.
ಬೆಳಕಿಗೆ ಬಂದಿದ್ದು ಹೇಗೆ..?
ಸೀ ಶೆಫರ್ಡ್ ಅಧಿಕಾರಿಗಳು ಒಂದು ಡ್ರೋನ್ ಕಳುಹಿಸಿದ್ದು, ಅದು ತಿಮಿಂಗಿಲಗಳು ವಾಸಿಸುವ ಪ್ರದೇಶಕ್ಕೆ ಹೋಗುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಆ ಕ್ಷಣದಲ್ಲಿ, ಬಂದೂಕುಧಾರಿ ಶಾಟ್‍ಗನ್‍ನಿಂದ ಬೇಟಿಯಾಡಿ ಎಂದು ಡ್ರೋನ್ ಮೇಲೆ ಗುಂಡು ಹಾರಿಸಿದ್ದಾನೆ. ಇಲ್ಲಿನ ಕೆಲವರು ತಮ್ಮ ಸಂಸ್ಕøತಿಯನ್ನ ಗೌರವಿಸಿ ಎಂದು ವಿದೇಶಿ ಮಾಧ್ಯಮಗಳನ್ನು ಮತ್ತು ಎಸ್ ಜಿಒಗಳಿಗೆ ಮನವಿ ಮಾಡಿಕೊಂಡಿದ್ದಾರೆ. ತಿಮಿಂಗಿಲ ಮಾಂಸವನ್ನು ಅನೇಕ ಸ್ಥಳೀಯರು ತಿನ್ನುತ್ತಾರೆ. ಆದ್ರೆ ಈ ರೀತಿಯಾಗಿ ಹತ್ಯಾಕಾಂಡ ನಡೆಸುವುದು ಸರಿಯಲ್ಲ ಎಂದು ಅಧಿಕಾರಿಗಳು ವಾದಿಸಿದ್ದಾರೆ.








