ಅಂಗನವಾಡಿ ಪೌಷ್ಠಿಕಾಂಶಯುಕ್ತ ಪೌಡರ್ ನಲ್ಲಿ ಹುಳು ಪತ್ತೆ
ಕಲಬುರಗಿ : ಅಂಗನವಾಡಿ ಕೇಂದ್ರದಿಂದ ನೀಡುವ ಪೌಷ್ಟಿಕಾಂಶಯುಕ್ತ ಪೌಡರ್ನಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆ ಕಲಬುರಗಿ ನಗರದ ಲಾಲಗೇರಿ ಕ್ರಾಸ್ ಬಡಾವಣೆಯಲ್ಲಿ ನಡೆದಿದೆ.
ಶಿಶುಗಳು ಮತ್ತು 3 ವರ್ಷದೊಳಗಿನ ಮಕ್ಕಳಿಗೆ ಕೊಡಲಾಗುವ ಪೌಷ್ಟಿಕಾಂಶವುಳ್ಳ ವಿವಿಧ ಪದಾರ್ಥಗಳ ಪೌಡರ್ ನಲ್ಲಿ ಹುಳುಗಳು ಪತ್ತೆಯಾಗಿವೆ.
ಈಗಾಗಲೇ ಅಂಗನವಾಡಿ ಕೇಂದ್ರದಿಂದ ನೂರಾರು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಪೌಡರ್ ಪ್ಯಾಕೆಟ್ಗಳ ವಿತರಣೆ ಮಾಡಲಾಗಿದೆ.
ಪ್ಯಾಕೆಟ್ ಮೇಲೆ ಎಕ್ಸ್ಪೈರ್ ಡೆಟ್ ಇನ್ನೂ ಮುಗಿದಿಲ್ಲ, ಆದರೂ ಪೌಷ್ಟಿಕಾಂಶಯುಕ್ತ ಪೌಡರ್ ಪ್ಯಾಕೆಟ್ನಲ್ಲಿ ಹುಳಗಳು ಪತ್ತೆ ಆಗಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.









