ಮಂಗಳೂರು : ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಕೇರಳದ ಉಪ್ಪಳದ ಮೊಹಮ್ಮದ್ ಅನ್ಸಾರ್ ಕಯ್ಯಾರ್ ಮತ್ತು ಕೊಝಿಕೋಡ್ನ ಮೊಹಮ್ಮದ್ ಮೂಸ ಮಿಯಾಸ್, ಬಂಧಿತರು.
ಇವರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ತಪಾಸಣೆ ನಡೆಸಿದಾಗ ಸೂಟ್ಕೇಸ್ನ ಕೆಳಭಾಗದಲ್ಲಿ ಚಿನ್ನವನ್ನು ಪೌಡರ್ ರೂಪದಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.
ಆರೋಪಿಗಳಿಂದ 703 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಇದರ ಮೌಲ್ಯ 34,46,464 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.