ನೆಟ್ಟಿಗರ ಹೃದಯ ಗೆಲ್ಲುತ್ತಿದೆ ಜ್ಯೂನಿಯರ್. ಮೀರಾಬಾಯ್ ಚಾನು ವಿಡಿಯೋ – VIRAL
ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ 2021 ರಲ್ಲಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟಿರುವ ಮೀರಾಬಾಯ್ ಚಾನು ಅಭಿಮಾನಿಗಳ ಮನ ಗೆದ್ದಿದ್ದಾರೆ.. ಪ್ರಧಾನಿ ಮೋದಿ ಹಾಗೂ ಗಣ್ಯರಿಂದ ಅಭಿನಂದನೆಗಳನ್ನ ಪಡೆದಿದ್ದಾರೆ.. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಮೀರಾಬಾಯ್ ಚಾನು ಹವಾ ಸೃಷ್ಟಿ ಮಾಡಿದ್ದಾರೆ.. ಹೌದು ಮೀರಾಬಾಯ್ ಚಾನು ವೇಯ್ಟ್ ಲಿಫ್ಟಿಂಗ್ ಮಾಡುತ್ತಾ ಕೈಗಳನ್ನ ಆಡಿಯನ್ಸ್ ಕಡೆ ತೋರಿಸುವ ರೀತಿಯಲ್ಲೇ ಪುಟ್ಟ ಮಗುವೊಂದು ಥೇಟ್ ಅದೇ ರೀತಿ ಅನುಕರಣೆ ಮಾಡಿದ್ದು, ಈ ವಿಡಿಯೋ ಇದೀಗ ನೆಟ್ಟಿಗರ ಹೃದಯ ಗೆದ್ದಿದೆ..
ಈ ಮಗುವಿನ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾಯಿದ್ದು, ವಿಶೇಷ ಅಂದ್ರೆ ಖುದ್ದು ಮೀರಾಬಾಯ್ ಚಾನು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.. “ ಸೋ ಕ್ಯೂಟ್ ಜಸ್ಟ್ ಲವ್ ದಿಸ್ “ ಎಂದು ಕಮೆಂಟ್ ತಿಳಿಸಿದ್ದಾರೆ. ಈ ವಿಡಿಯೋವನ್ನ ಮಾಜಿ ಕಾಮನ್ ವೆಲ್ತ್ ಗೋಲ್ಡ್ ಮೆಡಲಿಸ್ಟ್ ಸತೀಶ್ ಶಿವಲಿಂಗಮ್ ಶೇರ್ ಮಾಡಿದ್ದು, ಭಾರೀ ವೈರಲ್ ಆಗಿದೆ.. ಅಲ್ಲದೇ ಇದಕ್ಕೆ “ ಮೇರಾಬಾಯ್ ಚಾನು ಇನ್ಸಪಿರೇಷನ್ “ ಅಂತ ನೀಡಲಾಗಿದೆ..
https://twitter.com/i/status/1419732734738518042









