ಉತ್ತರ ಕನ್ನಡ | ಪ್ರವಾಹಪೀಡಿತರ ಕಷ್ಟ ಕೇಳಿದ ಬೊಮ್ಮಾಯಿ
ಉತ್ತರ ಕನ್ನಡ : ಜಿಲ್ಲೆ ಯಲ್ಲಾಪುರದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿದ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸಾರ್ವಜನಿಕರ ಕಷ್ಟವನ್ನ ಆಲಿಸಿರು.
ಯಲ್ಲಾಪುರ ತಾಲೂಕಿನ ಅರಬೈಲು ಘಟ್ಟ ಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಿದ ಸಿಎಂ ಪ್ರವಾಹಪೀಡಿತರ ಪರಿಸ್ಥಿತಿಯನ್ನ ವೀಕ್ಷಿಸಿದ್ರು.
ಅರಬೈಲು ಘಟ್ಟ ಪ್ರದೇಶದಲ್ಲಿ ಹೆದ್ದಾರಿ ಕುಸಿತವಾದ ಪ್ರದೇಶ ವೀಕ್ಷಿಸಿದ ಸಿಎಂ ನೊಂದವರಿಗೆ ಸಾಂತ್ವನ ಹೇಳಿದ್ರು.
ಅರಬೈಲ್ ಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಕಡೆ ಗುಡ್ಡ ಕುಸಿತವಾಗಿದ್ದು, ಹೆದ್ದಾತಿ ಪ್ರಾಧಿಕಾರ ಶಾಶ್ವತ ಕಾಮಗಾರಿಗೆ ಸುಮಾರು 70 ಕೋಟಿಗೂ ಅಧಿಕ ಅನುದಾನ ಬೇಡಿಕೆ ಇಟ್ಟಿದ್ದಾರೆ.