ದೇಶದಲ್ಲಿ ಒಟ್ಟು 24 ವಿಶ್ವವಿದ್ಯಾಲಯಗಳು ನಕಲಿ : ಕರ್ನಾಟಕದಲ್ಲಿ ಎಷ್ಟು ಗೊತ್ತಾ..?
ನವದೆಹಲಿ : ಭಾರತದಲ್ಲಿ ಒಟ್ಟು 24 ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧಮೆರ್ಂದ್ರ ಪ್ರಧಾನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಚಿವರು ಈ ಕುರಿತಂತೆ ಲಿಖಿತ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು, ಪೋಷಕರು, ಜನ ಸಾಮಾನ್ಯರು ಮೂಲಕ ನೀಡಿರುವ ದೂರುಗಳ ಆಧಾರದ ಮೇಲೆ 24 ವಿವಿ ನಕಲಿ ಎಂದು ಘೋಷಿಸಲಾಗಿದೆ ಎಂದಿದ್ದಾರೆ.
ಕರ್ನಾಟಕದ ಒಂದು ವಿಶ್ವವಿದ್ಯಾಲಯ ಕೂಡ ನಕಲಿ ಎಂದು ಗೊತ್ತಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 8 ವಿಶ್ವವಿದ್ಯಾಲಯಗಳು ನಕಲಿಯಾಗಿದ್ದರೇ, ದೆಹಲಿಯಲ್ಲಿ ಏಳು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ವಿಶ್ವವಿದ್ಯಾಲಯಗಳು ನಕಲಿಯಾಗಿವೆ.
ಯಾವೆಲ್ಲ ವಿಶ್ವವಿದ್ಯಾಲಯಗಳು ನಕಲಿ
ವಾರಾಣಸಿ: ಸಂಸ್ಕøತ ವಿಶ್ವವಿದ್ಯಾಲಯ; ಮಹಿಳಾ ಗ್ರಾಮ ವಿದ್ಯಾಪೀಠ
ಅಲಹಾಬಾದ್:ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ
ಮಥುರಾ: ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ
ಪ್ರತಾಪಘರ್ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್
ಕಾನ್ಪುರ್: ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ
ಅಲಿಘರ್: ಉತ್ತರ ಪ್ರದೇಶ ವಿಶ್ವವಿದ್ಯಾಲಯ
ದೆಹಲಿ: ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್
ಎಡಿಆರ್ ಸೆಂಟ್ರಿಕ್ ಜುರಿಡಿಕಲ್ ವಿಶ್ವವಿದ್ಯಾಲಯ ದೆಹಲಿ
ಇಂಡಿಯನ್ ಇನ್ ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್
ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್
ಆಧ್ಯಾತ್ಮಿಕ ವಿಶ್ವವಿದ್ಯಾಲಯ (ಆಧ್ಯಾತ್ಮಿಕ ವಿಶ್ವವಿದ್ಯಾಲಯ)
ವೊಕೇಷನಲ್ ಯೂನಿವರ್ಸಿಟಿ ದೆಹಲಿ
ಯನೈಟೆಡ್ ನೇಷನ್ಸ್ ಯೂನಿವರ್ಸಿಟಿ ದೆಹಲಿ
ಕರ್ನಾಟಕ: ಬಡಗನ್ವಿ ಸರ್ಕಾರ್ ವಲ್ರ್ಡ್ ಓಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ
ಉಳಿದಂತೆ ಪಶ್ವಿಮ ಬಂಗಾಳ, ಒಡಿಶಾದಲ್ಲಿ ಎರಡು, ಕರ್ನಾಟಕ ಮಹಾರಾಷ್ಟ್ರ, ಪುದುಚೇರಿ, ಕೇರಳ ಮತ್ತು ಮಹಾರಾಷ್ಟ್ರದಲ್ಲೂ ತಲಾ ಒಂದು ನಕಲಿ ವಿಶ್ವವಿದ್ಯಾಲಯವಿದೆ.









