ವಿಮಾನ ಪತನ: ಮಿನ್ನೇಸೋಟದಲ್ಲಿ ಹಲವರು ಸಾವು
ಅಮೆರಿಕ : ಮಿನ್ನೇಸೋಟ ರಾಜ್ಯದ ವಿಕ್ಟೋರಿಯಾ ನಗರದಲ್ಲಿ ಮೂನೆ ಎಂ 20 ಸಿಂಗಲ್ ಇಂಜಿನ್ ವಿಮಾನ ಅಪ್ಪಳಿಸಿದ್ದು, ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ.
ಈ ಘಟನೆ ಶನಿವಾರ ಸುಮಾರು ರಾತ್ರಿ 10:40ಕ್ಕೆ ನಡೆದಿದ್ದು, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ನಿಖರವಾಗಿ ತಿಳಿದಿಲ್ಲ.
ಅಪಘಾತಕ್ಕೀಡಾದ ವಿಮಾನ ಅಲೆಕ್ಸಾಂಡ್ರಿಯಾ ಮುನ್ಸಿಪಲ್ ವಿಮಾನ ನಿಲ್ದಾಣದಿಂದ ಈಡನ್ ಪ್ರೈರಿಯಲ್ಲಿರುವ ಫ್ಲೈಯಿಂಗ್ ಕ್ಲೌಡ್ ಏರ್ ಪೋರ್ಟ್ ಗೆ ಹೊರಟಿತ್ತು ಎಂದು ತಿಳಿದುಬಂದಿದೆ.
ಈ ಘಟನೆಯ ಕುರಿತು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ಶುರು ಮಾಡಿವೆ.









