ಶೀಘ್ರದಲ್ಲೇ ಹಸೆಮಣೆ ಏರುತ್ತಿರೋದಾಗಿ ತಿಳಿಸಿದ ನಯನತಾರಾ
ಹೈದರಾಬಾದ್ : ಲೇಡಿ ಸೂಪರ್ ಸ್ಟಾರ್, ಬಹುಭಾಷಾ ನಟಿ ನಯನತಾರಾ ಶೀಘ್ರದಲ್ಲೇ ಹಸೆಮಣೆ ಏರುತ್ತಿರೋದಾಗಿ ತಿಳಿಸಿದ್ದಾರೆ.
ಖಾಸಗಿ ಚಾನೆಲ್ ನಲ್ಲಿ ನಡೆದ ಸಂದರ್ಶನದ ವೇಳೆ ನಯನ ತಾರಾ ತಮ್ಮ ಬಹುಕಾದ ಗೆಳೆಯ ವಿಘ್ನೇಶ್ ಶಿವನ್ ಒಟ್ಟಿಗೆ ತಾವು ಎಂಗೇಜ್ ಮೆಂಟ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ತಮ್ಮ ಎಂಗೇಜ್ ಮೆಂಟ್ ರೀಂಗ್ ಅನ್ನು ಬಹಿರಂಗವಾಗಿ ತೋರಿಸಿ ಆದಷ್ಟು ಬೇಗ ಮದುವೆ ಆಗೋದಾಗಿ ಮಾಹಿತಿ ನೀಡಿದ್ದಾರೆ.
ಸಂದರ್ಶನದಲ್ಲಿ ನಯನತಾರಾ, ನಾನು ರೌಡಿದಾನ್ ಸಿನಿಮಾ ಸೆಟ್ ನಲ್ಲಿ ವಿಘ್ನೇಶ್ ಅವರನ್ನು ಮೊದಲಿದೆ ಭೇಟಿಯಾಗಿದ್ದೆ ಎಂದು ಹೇಳಿದ್ದು, ಕೈಯಲ್ಲಿರುವ ಎಂಗೇಜ್ ಮೆಂಟ್ ರಿಂಗ್ ತೋರಿಸಿದ್ದಾರೆ.
ಅಂದಹಾಗೆ ನಯನತಾರಾ ತಮ್ಮ ಇನ್ಸ್ ಸ್ಟಾದಲ್ಲಿ ವಿಘ್ನೇಷ್ ಅವರ ಜೊತೆಗೆ ಇರುವ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.