ಕುಡಿದ ಮತ್ತಿನಲ್ಲಿ ಅಣ್ಣನನ್ನೇ ಕೊಂದ ತಮ್ಮ vijayapura saaksha tv
ವಿಜಯಪುರ : ಕುಡಿದ ಮತ್ತಿನಲ್ಲಿ ಸಹೋದರನೊರ್ವ ತನ್ನ ಅಣ್ಣನನ್ನೇ ಚುಚ್ಚಿ ಕೊಲೆ ಮಾಡಿರುವ ಘಟನೆ ದೇವರಹಿಪ್ಪರಗಿ ತಾಲೂಕಿನ ಮಣೂರು ತಾಂಡಾದಲ್ಲಿ ನಡೆದಿದೆ.
38 ವರ್ಷದ ಅರ್ಜುನ ರಾಠೋಡ ಕೊಲೆಯಾದ ವ್ಯಕ್ತಿಯಾಗಿದ್ದು, ಹಣಮಂತ ರಾಠೋಡ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ.
ಕುಡಿದ ಮತ್ತಿನಲ್ಲಿ ತಂದೆಯ ಜೊತೆ ಹಣಮಂತ ಗಲಾಟೆ ಮಾಡುತ್ತಿದ್ದ.
ಈ ವೇಳೆ ಜಗಳ ಬಿಡಿಸಲು ಹೋದ ಅರ್ಜುನ್ ಗೆ ಹಣಮಂತ ಚಾಕುವಿನಿಂದ ಇರಿದಿದ್ದಾನೆ.
ಪರಿಣಾಮ ತೀವ್ರವಾಗಿ ಗಾಯಗೊಂಡ ಅರ್ಜುನ್ ಮೃತಪಟ್ಟಿದ್ದಾನೆ.
ಇನ್ನು ಈ ಸಂಬಂಧ ದೇವರ ಹಿಪ್ಪರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









