ಜನ್ಮದಿನದ ಸಂಭ್ರಮದಲ್ಲಿ ಚಂದನವನದ `ಅರಗಿಣಿ’
ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಪಡೆದು, ‘ಅನುರಾಗ ಸಂಗಮ’ದಲ್ಲಿ ಕಣ್ಣಿಲ್ಲದ ಹುಡುಗಿಯಾಗಿ, ಮೈಸೂರು ಮಲ್ಲಿಗೆ’ಯಲ್ಲಿ ಪ್ರೇಮದ ಹುಡುಗಿಯಾಗಿ, ನಿನ್ನಂಥ ಅಪ್ಪ ಇಲ್ಲ ಎನ್ನುತ್ತಾ ರಾಜ್ ಜೊತೆ ಹೆಜ್ಜೆ ಹಾಕಿದ್ದ ನಟಿ ಸುಧಾರಾಣಿ ಅವರಿಗೆ ಇಂದು ಜನ್ಮ ದಿನದ ಸಂಭ್ರಮ.
ಡಾ.ರಾಜ್ ಕುಮಾರ್ ಅಭಿನಯದ ದೇವತಾ ಮನುಷ್ಯ ಚಿತ್ರದಿಂದ ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಸುಧಾರಾಣಿ ನಂತರ ಶಿವರಾಜ್ ಕುಮಾರ್ ನಟನೆಯ ‘ಆನಂದ್’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪರಿಚಯವಾದರು.
ಚಂದನವನದ ಎಲ್ಲಾ ಬಿಗ್ ಸ್ಟಾರ್ ಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿದ ಸುಧಾರಾಣಿ ಅವರು ಇಂದು 52 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಇವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಆಗಸ್ಟ್ 14,1970 ರಲ್ಲಿ ಜನಿಸಿದರು. ಕನ್ನಡ ಚಿತ್ರರಂಗವಲ್ಲದೇ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ಹಿರಿ-ಕಿರುತೆರೆಯ ನಟಿಸಿ ಜನರ ಮನ ಮೆಚ್ಚಿದ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಅಂದಹಾಗೆ ಸುಧಾರಾಣಿ ಆನಂದ್ ಸಿನಿಮಾಗೂ ಮುನ್ನಾ ‘ಕಿಲಾಡಿ ಕಿಟ್ಟು’, ‘ರಂಗನಾಯಕಿ’ ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ನಂತರ ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಅನುರಾಗ ಸಂಗಮ, ದೇವತಾ ಮನುಷ್ಯ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಜೀವನ ಚೈತ್ರ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.









