ಕರ್ನಾಟಕದಲ್ಲಿ ಸುಸಜ್ಜಿತ ಫಿಲಂ ಸಿಟಿ ನಿರ್ಮಾಣ – ಗುದ್ದಲಿ ಪೂಜೆ ನೆರವೇರಿಸಿದ ಉಮಾಪತಿ..!
ರಾಬರ್ಟ್ ನಂತರ ಬಿಗ್ ಸಿನಿಮಾಗಳಲ್ಲಿ ಬಂಡವಾಳ ಹೂಡಿರುವ ಚಂದನವನದ ನಿರ್ಮಾಪಕ ಉಮಾಪತಿ ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ರ. ಯಾವುದೋ ಸಿನಿಮಾ ವಿಚಾರವಾಗಲ್ಲ.. ಬದಲಾಗಿ 25 ಕೋಟಿ ವಂಚನೆ ಕೇಸ್ ಆರೋಪದಲ್ಲಿ ದರ್ಶನ್ ಹಾಗೂ ಉಮಾಪತಿ ಇಬ್ರೂ ಭಾರೀ ಸುದ್ದಿಯಲ್ಲಿದ್ರು.. ಈ ಪ್ರಕರಣ ಇದೀಗ ತಣ್ಣಗಾಗಿದೆ.. ಆದ್ರೆ ಉಮಾಪತಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.. ಆದ್ರೆ ಈ ಬಾರಿ ಉಮಾಪತಿ ಅವರು ಸುದ್ದಿಯಲ್ಲಿರೋದು ಒಂದು ವಿಶೇಷ ಕಾರಣದಿಂದ. ಹೌದು ಉಮಾಪತಿ ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಕರ್ನಾಟಕದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡ್ಬೇಕು ಎಂದು ಈ ಹಿಂದೆ ಉಮಾಪತಿ ಅವರು ಹೇಳಿಕೊಂಡಿದ್ರು.. ಈಗ ಅದ್ರಂತೆ ನುಡಿದಂತೆ ನಡೆಯುತ್ತಿದ್ದಾರೆ.. ಅಂದ್ರೆ ಕರ್ನಾಟಕದಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.. ಗುದ್ದಲಿ ಪೂಜೆ ಕೂಡ ನೆರವೇರಿಸಿದ್ದಾರೆ. 
ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿರುವ ಕನಕಪುರದಲ್ಲಿ ಸರಿ ಸುಮಾರು 25 ಎಕರೆ ಭೂಮಿಯಲ್ಲಿ ಸುಸಜ್ಜಿತವಾದ , ವಿಶಾಲವಾದ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ ಉಮಾಪತಿ ಅವರು. ಇಂದು ಕುಟುಂಬದವರ ಜೊತೆಗೂಡಿ ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದಾರೆ. ಅಲ್ಲದೇ ಈ ಯೋಜನೆಗೆ ಸರಿ ಸುಮಾರು 175 ಕೋಟಿ ರೂಪಾಯಿಗಳನ್ನ ಖರ್ಚು ಮಾಡ್ತಿದ್ದಾರೆ ಎನ್ನಲಾಗಿದೆ. ಕೇವಲ 1 ವರ್ಷದ ಅವಧಿಯೊಳಗಡೆ ಫಿಲಂ ಸಿಟಿ ನಿರ್ಮಾಣ ಮುಗಿಸುವ ಯೋಜನೆಯನ್ನೂ ಹೊಂದಿದ್ದಾರೆ ಎನ್ನಲಾಗಿದೆ.
ಸದ್ಯ ಸಿನಿಮಾ ವಿಚಾರಕ್ಕೆ ಬರುವುದಾದ್ರೆ ಲಾಕ್ ಡೌನ್ ಗೂ ಮುಂಚೆ ಉಮಾಪತಿ ನಿರ್ಮಾಣ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಪೀಸ್ ನಲ್ಲು ಭರ್ಜರಿ ಕಲೆಕ್ಷನ್ ಮಾಡಿತ್ತು.. ಇದೀಗ ಉಮಾಪತಿ ಬಂಡವಾಳ ಹೂಡಿರುವ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಚಿತ್ರದ ಕೆಲಸಗಳು ಇನ್ನೇನು ಕೊನೆ ಹಂತ ತಲುಪಿದೆ. ಸಂಪೂರ್ಣವಾಗಿ ಸಿನಿಮಾ ರಿಲೀಸ್ ಗೆ ರೆಡಿಯಾದ ನಂತರ ಕೊರೊನಾ ಹಾವಳಿ ನಿಯಂತ್ರಣ ಬಂದು ಸಿನಿಮಾ ಮಂದಿರಗಳಲ್ಲಿ 100 % ಸಿಟಿಂಗ್ ಘೋಷಣೆ ಆಗ್ತಿದ್ದಂತೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುವ ನಿರೀಕ್ಷೆ ಇದೆ..








