ಇಂದು ವಾಜಪೇಯಿ 3ನೇ ವರ್ಷದ ಪುಣ್ಯಸ್ಮರಣೆ ದಿನ : ಗಣ್ಯರಿಂದ ಗೌರವ atal-bihari saaksha tv
ನವದೆಹಲಿ : ಇಂದು ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ದಿನ.
ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಗಣ್ಯರು ಅಟಲ್ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಕೆ ಮಾಡಿದ್ದಾರೆ.
ದೆಹಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಸದೈವ್ ಅಟಲ್ ಗೆ ತೆರಳಿ ಗಣ್ಯರು, ಪುಷ್ಪಾರ್ಚನೆ ಮಾಡಿದರು.
ಇನ್ನು ಮೂರು ಅವಧಿಗೆ ಪ್ರಧಾನಿಯಾಗಿದ್ದ ವಾಜಪೇಯಿ, 1996ರಲ್ಲಿ ಮೊದಲ ಸಲ 13 ದಿನ, 1998ರಲ್ಲಿ ಎರಡನೇ ಸಲ 13 ತಿಂಗಳು ಹಾಗೂ 1999ರಲ್ಲಿ ಮೂರನೇ ಅವಧಿಗೆ ಪಿಎಂ ಆಗಿದ್ದ ಅವರು ಐದು ವರ್ಷಗಳ ಅವಧಿ ಪೂರೈಕೆ ಮಾಡಿದ್ದರು.