ಇಂಡೋ-ಆಂಗ್ಲೋ ಟೆಸ್ಟ್ ಪಂದ್ಯ : ಇಂಗ್ಲೆಂಡ್ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ball tampering saaksha tv
ಲಂಡನ್ : ಲಾಡ್ರ್ಸ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯ ಕುತೂಹಲಕಾರಿ ಘಟ್ಟತಲುಪಿದೆ.
ಈ ಮಧ್ಯೆ ಇಂಗ್ಲೆಂಡ್ ಆಟಗಾರರ ವಿರುದ್ಧ ಬಾಲ್ ಟ್ಯಾಂಪಂರಿಂಗ್ ಆರೋಪ ಕೇಳಿಬಂದಿದೆ.
2ನೇ ಟೆಸ್ಟ್ ನ 4ನೇ ದಿನದ ಲಂಚ್ ಬ್ರೇಕ್ ನಲ್ಲಿ ಇಂಗ್ಲೆಂಡ್ ಆಟಗಾರರಿಬ್ಬರು ತಮ್ಮ ಶೂಗಳ ಮೂಲಕ ಚೆಂಡನ್ನು ವಿರೂಪಗೊಳಿಸುತ್ತಿರುವುದು ಸೆರೆಯಾಗಿದೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇನ್ನು ಈಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು, ಇದು ಬಾಲ್ ಟ್ಯಾಂಪರಿಂಗ್ ಅಥವಾ ಕೋವಿಡ್-19 ತಡೆಗಟ್ಟುವ ಕ್ರಮವೇ..? ಅಂತಾ ಪ್ರಶ್ನಿಸಿ ಪರೋಕ್ಷವಾಗಿ ಇಂಗ್ಲೆಂಡ್ ಆಟಗಾರರ ಕಾಲೆಳೆದಿದ್ದಾರೆ.