ಬೆಂಗಳೂರಲ್ಲಿ ವ್ಯಾಕ್ಸಿನ್ ಕೊರತೆ : ಗೌರವ ಗುಪ್ತಾ ಹೇಳಿದ್ದೇನು..?
ಬೆಂಗಳೂರು : ನಗರದಲ್ಲಿ ಆರಂಭದಿಂದಲೂ ವಾಕ್ಸಿನ್ ಕೊರತೆ ಉಂಟಾಗುತ್ತಲೇ ಇದೆ. ಈ ಬಗ್ಗೆ ಇದೀಗ ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಪ್ರತಿಕ್ರಿಯೆ ನೀಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಒಂದು ಲಸಿಕೆ ಅವಶ್ಯವಿದೆ. ಆದ್ರೆ ನಗರದಲ್ಲಿ ಪ್ರಸ್ತುತ ಲಸಿಕೆ ಕೊಂಚ ಕಡಿಮೆ ಇದೆ ಎಂದು ತಿಳಿಸಿದರು.
ಅಲ್ಲದೆ ಇದೇ ವಿಚಾರವಾಗಿ ಸಭೆ ಕರೆಯಲಾಗಿದೆ. ನಗರದಲ್ಲಿ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳುವ ಕೆಲಸ ಪಾಲಿಕೆ ಮಾಡಲಿದೆ. ಸೆಕೆಂಡ್ ಡೋಸ್ ಕ್ರಮೇಣ ಜಾಸ್ತಿ ಆಗಿದೆ ಎಂದು ತಿಳಿಸಿದರು.
ಇನ್ನು ನಗರದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಅವರು, ಮಕ್ಕಳ ಟೆಸ್ಟಿಂಗ್ ಜಾಸ್ತಿ ಮಾಡ್ತಿದ್ದೀವಿ.
ಯಾವ ಮನೆಯಲ್ಲಿ ಅದ್ರೂ ಪಾಸಿಟಿವ್ ಕೇಸ್ ಬಂದ್ರೆ ಮಕ್ಕಳನ್ನ ಟೆಸ್ಟ್ ಮಾಡ್ತೀವಿ. ಮಕ್ಕಳಿಗೆ ಟೆಸ್ಟಿಂಗ್ 50% ಜಾಸ್ತಿ ಮಾಡಿದ್ದೀವಿ. ಹೀಗಾಗಿ ಕೇಸ್ ಗಳು ಹೆಚ್ಚಾಗುತ್ತಿವೆ ಎಂದರು.
ಬಳಿಕ ನೈಟ್ ಕಫ್ರ್ಯೂ ಬಗ್ಗೆ ಮಾತನಾಡಿ, ನೈಟ್ ಕಫ್ರ್ಯೂ 9 ಗಂಟೆ ಒಳಗಡೆ ಎಲ್ಲಾ ಶಾಪ್ ಗಳು ಕ್ಲೋಸ್ ಮಾಡಬೇಕು.
ಈ ಬಗ್ಗೆ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳು ಕಠಿಣವಾದ ನಿರ್ಧಾರ ತೆಗೆದುಕೊಳ್ಳಿ ಎಂದೇಳಿದ್ದಾರೆ.
ಮುಂದಿನ ದಿನಗಳಲ್ಲಿ ಯಾರು ರಾತ್ರಿ 9 ಗಂಟೆ ಮೇಲೆ ಶಾಪ್ ಓಪನ್ ಮಾಡ್ತಾರೊ ಅವ್ರು ವಿರುದ್ಧ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.









