ಬೆಳಗಾವಿಯಲ್ಲಿ ಮತ್ತೆ ಕ್ಯಾತೆ ತೆಗೆದ ಎಂಇಎಸ್ MES saaksha tv
ಬೆಳಗಾವಿ : ಪ್ರತಿಬಾರಿ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಇರುವ ಎಂಇಎಸ್ ಇದೀಗ ಹೊಸ ಕ್ಯಾತೆ ತೆಗೆದಿದೆ.
ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಂದಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕನ್ನಡದಲ್ಲಿ ನಾಮಪತ್ರ ಸಲ್ಲಿಕೆ ಮಾಡಬೇಕಾಗುತ್ತದೆ.
ಆದ್ರೆ ಇದಕ್ಕೆ ಎಂಇಎಸ್ ಚಕಾರವೆತ್ತಿದ್ದು, ಮರಾಠಿ ಭಾಷೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದೆ.
ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಎಂಇಎಸ್ ಕಾರ್ಯಕರ್ತರು ಪತ್ರ ಮುಖೇನ ಮನವಿ ಸಲ್ಲಿಕೆ ಮಾಡಿದ್ದಾರೆ.
ಅಲ್ಲದೆ ಕನ್ನಡದಲ್ಲಿ ನಾಮಪತ್ರ ಸಲ್ಲಿಸಲು ಸಮಸ್ಯೆ ಆಗುತ್ತಿದೆ. ಹೀಗಾಗಿ ಮರಾಠಿಯಲ್ಲಿ ದಾಖಲೆ ನೀಡಲು ಅವಕಾಶ ನೀಡುವಂತೆ ಎಂಇಎಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.









