ಹೈದರಾಬಾದ್ ನಲ್ಲಿ ಸಿರಾಜ್ ಕಟೌಟ್ Siraj cutout saaksha tv
ಹೈದರಾಬಾದ್ : ಕ್ರಿಕೆಟ್ ಕಾಶಿ ಲಾಡ್ರ್ಸ್ ಅಂಗಳದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ನೀಡಿದ ಪ್ರದರ್ಶನ ಟೀಂ ಇಂಡಿಯಾದ ಐತಿಹಾಸಿಕ ಗೆಲುವಿಗೆ ಕಾರಣವಾಗಿದೆ.
ಲಾಡ್ರ್ಸ್ ಅಂಗಳದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನು ಕಾಡಿದ ಸಿರಾಜ್ ಬರೋಬ್ಬರಿ ಎಂಟು ವಿಕೆಟ್ ಗಳನ್ನು ಕಬಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಸಿರಾಜ್ ಅವರ ಈ ಅತ್ಯುದ್ಭುತ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಸಿರಾಜ್ ಅವರ ತವರು ಹೈದರಾಬಾದ್ ನಲ್ಲಿ ಸಂಭ್ರಮ ಜೋರಾಗಿದ್ದು, ಸಿರಾಜ್ ಅವರ ಕಟೌಟ್ ನಿರ್ಮಿಸಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ 8 ವಿಕೆಟ್ ಪಡೆದ ಸಿರಾಜ್, 39 ವರ್ಷಗಳ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಬ್ರೇಕ್ ಮಾಡಿದರು.
ಇದರಿಂದ ಫುಲ್ ಖುಷ್ ಆಗಿರುವ ಸಿರಾಜ್ ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳು ಹೈದರಾಬಾದ್ ಬಲ್ಲಿ ಸಿರಾಜ್ ಅವರ ಬೃಹತ್ ಕಟೌಟ್ ನಿರ್ಮಿಸಿದ್ದಾರೆ.









