ಕಾಂಚನಾ-3 ಸಿನಿಮಾದ ನಟಿ ಅಲೆಕ್ಸಾಂಡ್ರಾ ಶವ ಪತ್ತೆ
ಚೆನ್ನೈ : ಕಾಲಿವುಡ್ ನಟ ರಾಘವ್ ಲಾರೆನ್ಸ್ ನಟನೆಯ ಕಾಂಚನಾ-3 ಸಿನಿಮಾದಲ್ಲಿ ಅಭಿನಯಿಸಿದ್ದ ರಷ್ಯನ್ ನಟಿ ಕಮ್ ಮಾಡೆಲ್ ಅಲೆಕ್ಸಾಂಡ್ರಾ ಸಾವನ್ನಪ್ಪಿದ್ದಾರೆ.
ಉತ್ತರ ಗೋವಾದಲ್ಲಿ ವಾಸಿವಿದ್ದ ಅಲೆಕ್ಸಂಡ್ರಾ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ನೆರೆಹೊರೆ ಮನೆಯವರ ಪ್ರಕಾರ, ಕೆಲ ದಿನಗಳ ಹಿಂದೆ ಅಲೆಕ್ಸಂಡ್ರಾ ಬಾಯ್ ಫ್ರಂಡ್ ಅವರ ಜೊತೆ ಹೊರಬಂದಿದ್ದರು. ಇದಾದ ಬಳಿಕ ಅಲೆಕ್ಸಂಡ್ರಾ ಬಹಳ ಖಿನ್ನತೆಯಲ್ಲಿದ್ದರು ಎಂದಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲೆಕ್ಸಂಡ್ರಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಅಲೆಕ್ಸಾಂಡ್ರಾ ಮೂಲತಃ ರಷ್ಯಾದವರಾಗಿದ್ದು, ಅವರ ಕುಟುಂಬಸ್ಥರು ರಷ್ಯಾದಲ್ಲಿರುವುದರಿಂದ ಮಾಹಿತಿ ನೀಡಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಇದೀಗ ತನಿಖೆ ನಡೆಸಲು ಆರಂಭಿಸಿದ್ದಾರೆ.