ಅವನೊಬ್ಬ ಹುಚ್ಚ : ಯತ್ನಾಳ್ ವಿರುದ್ಧ ಡಿಕೆಶಿ ಗರಂ
ಬೆಂಗಳೂರು : ಅವನೊಬ್ಬ ಹುಚ್ಚ, ಕೋವಿಡ್ ವೈಫಲ್ಯ, ಬೆಲೆ ಏರಿಕೆಯನ್ನ ಡೈವರ್ಟ್ ಮಾಡೋಕೆ, ಪ್ರಚಾರದಲ್ಲಿ ಇರೋಕೆ ಏನು ಬೇಕಾದರು ಮಾತನಾಡುತ್ತಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಚ್ಚ ಎಂಬ ಯತ್ನಾಳ್ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ, ಒಬ್ಬ ಹುಚ್ಚ ಪ್ರಚಾರದಲ್ಲಿ ಇರೋಕೆ ಏನು ಬೇಕಾದರು ಮಾತನಾಡುತ್ತಾನೆ.
ಅವನೊಬ್ಬ ಹುಚ್ಚ. ಕೋವಿಡ್ ವೈಫಲ್ಯ ಬೆಲೆ ಏರಿಕೆಯನ್ನೆಲ್ಲ ಡೈವರ್ಟ್ ಮಾಡೋಕೆ ಇಂತದೆಲ್ಲಾ ಮಾತನಾಡುತ್ತಾರೆ ಎಂದು ಗರಂ ಆದರು.
ಇದೇ ವೇಳೆ ಅಫ್ಘಾನ್ ವಿದ್ಯಾರ್ಥಿಗಳ ಭೇಟಿ ಬಗ್ಗೆ ಮಾತನಾಡಿ, ಅಘ್ಘಾನ್ ವಿಧ್ಯಾರ್ಥಿಗಳು ನನ್ನ ಭೇಟಿಗೆ ಬಂದಿದ್ದರು. ನಮ್ಮ ರಾಜ್ಯದಲ್ಲಿ ಎಲ್ಲ ತರಹದ ರಕ್ಷಣೆ ಕೊಡಬೇಕಾಗುತ್ತದೆ ಎಂದಿದ್ದೇನೆ.
ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಮುಖ್ಯವಾಗುತ್ತದೆ ಎಂದರು.
ಇನ್ನು ಇಂದು ವಿನಯ್ ಕುಲಕರ್ಣಿ ಅವರು ಡಿಕೆಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ವಿನಯ್ ಕುಲಕರ್ಣಿ ಸೋತಿರಬಹುದು.
ರಾಜಕೀಯವಾಗಿ ಅವರಿಗೆ ಬಹಳಷ್ಟು ನೋವು ಆಗಿದೆ. ಅವರಿಗೆ ಆದ ನೋವು ಹಂಚಿಕೊಂಡಿದ್ದಾರೆ. ಅವರಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೇವೆ ಎಂದು ಹೇಳಿದ ಡಿಕೆಶಿ, ಕುಲಕರ್ಣಿ ಅವರ ಪರವಾಗಿ ಕಾಂಗ್ರೆಸ್ ಇರುತ್ತದೆ ಎಂದರು.









