ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ರಸ್ತೆಗಳ ಬಳಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಹೊಸ ಟೋಲ್ ದರಗಳು ಜಾರಿಗೆ ಬಂದಿವೆ.
ಈ ದರ ಪರಿಷ್ಕರಣೆ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಹೊಸೂರು ರಸ್ತೆ) ಹಾಗೂ ನೈಸ್ ರಸ್ತೆ ಬಳಸುವ ವಾಹನಗಳಿಗೆ ಅನ್ವಯವಾಗಲಿದೆ.
ಟೋಲ್ ದರಗಳನ್ನು ನಂದಿ ಎಕನಾಮಿಕ್ ಕಾರಿಡಾರ್ ಎಂಟಪ್ರೈಸಸ್ ಲಿಮಿಟೆಡ್, ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ ಅಡಿಯಲ್ಲಿ ಪರಿಷ್ಕರಿಸಿದೆ.
ಹೊಸ ದರಗಳ ಪರಿಣಾಮವಾಗಿ ಪ್ರತಿದಿನ ಈ ರಸ್ತೆಗಳನ್ನು ಬಳಸುವ ಖಾಸಗಿ ವಾಹನಗಳು, ವಾಣಿಜ್ಯ ವಾಹನಗಳು ಹಾಗೂ ಕಚೇರಿಗೆ ಸಂಚರಿಸುವ ಪ್ರಯಾಣಿಕರ ಮಾಸಿಕ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.
ವಾಹನ ಸವಾರರು ಪ್ರಯಾಣಕ್ಕೂ ಮುನ್ನ ಪರಿಷ್ಕೃತ ಟೋಲ್ ದರಗಳನ್ನು ಪರಿಶೀಲಿಸಿ, ಅದರಂತೆ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.








