ಹೊಸ ಕೊರೊನಾವೈರಸ್ ವೇರಿಯಂಟ್ ಕೋವಿಡ್ -22 ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ
ಹೊಸ ಕೊರೊನಾವೈರಸ್ ಸೂಪರ್ ವೇರಿಯಂಟ್ ‘ಕೋವಿಡ್ -22’ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಕೊರೋನಾದ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
ಮುಂದಿನ ವರ್ಷ ಕೋವಿಡ್ -19 ಗಿಂತ ಅಪಾಯಕಾರಿಯಾದ ಕೊರೋನವೈರಸ್ನ ‘ಸೂಪರ್ ವೇರಿಯಂಟ್’ ಕಾಣಿಸಿಕೊಳ್ಳಬಹುದು ಮತ್ತು ಲಸಿಕೆ ಪಡೆಯದವರು ಇದರ ಸಂಭಾವ್ಯ ಸೂಪರ್ ಸ್ಪ್ರೆಡರ್ಗಳು ಎಂದು ತಜ್ಞರು ಎಚ್ಚರಿಸಿದ್ದಾರೆ. ಸೂಪರ್ ಸ್ಪ್ರೆಡರ್ ಅಂದರೆ ಸೋಂಕಿತ ವ್ಯಕ್ತಿ ಸರಾಸರಿಗಿಂತ ಹೆಚ್ಚಿನ ಜನರಿಗೆ ಸೋಂಕನ್ನು ಹರಡುತ್ತಾರೆ.

ಉದಾಹರಣೆಗೆ ಇಬ್ಬರು ವ್ಯಕ್ತಿಗಳಿಗೆ ಸೋಂಕು ತಗುಲಿದರೂ ಕೊರೋನಾ ಲಕ್ಷಣಗಳು ಕಾಣಿಸಿಲ್ಲ ಎಂದು ಭಾವಿಸೋಣ. ಇಬ್ಬರೂ ತಮ್ಮ ದೈನಂದಿನ ಜೀವನವನ್ನು ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿಯು ಎರಡು ಜನರಿಗೆ ವೈರಸ್ ಹರಡಬಹುದು ಇನ್ನೊಬ್ಬ ವ್ಯಕ್ತಿ ಹತ್ತು ಜನರನ್ನು ಅನಾರೋಗ್ಯಕ್ಕೆ ತಳ್ಳುವ ಸಾಮರ್ಥ್ಯವನ್ನು ಹೊಂದಿರಬಹುದು. ಸೂಪರ್ ಸ್ಪ್ರೆಡರ್ಗಳು ಹೆಚ್ಚಾಗಿ ‘ಹೊಸ ಪ್ರಸರಣ ಸರಪಳಿಯನ್ನು ಪ್ರಾರಂಭಿಸಿ, ಸಮುದಾಯ ಪ್ರಸರಣವನ್ನು ರಚಿಸಿ, ಮುಂದಿನ ಹಂತವನ್ನು ಆರಂಭಿಸುತ್ತಾರೆ .ಸರಾಸರಿ 2 ರಿಂದ 2.5 ಜನರಿಗೆ ಕೋವಿಡ್ -19 ಸೋಂಕನ್ನು ಹರಡುತ್ತಾರೆ.
ಕೊರೋನಾ ವೈರಸ್ನ ‘ಸೂಪರ್ ವೇರಿಯಂಟ್’ ಕುರಿತು ಎಚ್ಚರಿಕೆ
ಈಗಿರುವ ತಳಿಗಳು ಹೊಸ ಮತ್ತು ಹೆಚ್ಚು ಅಪಾಯಕಾರಿ ಸಾಂಕ್ರಾಮಿಕ ಯುಗಕ್ಕೆ ಕಾರಣವಾಗಬಹುದು ಎಂದು ಜ್ಯೂರಿಚ್ನ ಇಮ್ಯುನಾಲಜಿಸ್ಟ್ ಪ್ರೊಫೆಸರ್ ಸಾಯಿ ರೆಡ್ಡಿ ಹೇಳಿದ್ದಾರೆ. ಕೋವಿಡ್ -19 ನಾವು ಈಗ ನೋಡುತ್ತಿರುವುದಕ್ಕಿಂತ ಕೆಟ್ಟದಾಗಿರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಪರಿಣಾಮವಾಗಿ, ಮುಂದಿನ ಕೆಲವು ವರ್ಷಗಳಲ್ಲಿ ಒಂದಕ್ಕಿಂತ ಹೆಚ್ಚು ವ್ಯಾಕ್ಸಿನೇಷನ್ ತಯಾರಿಕೆಯ ಅಗತ್ಯವಿರುತ್ತದೆ. ಏಕೆಂದರೆ ಪ್ರಪಂಚವು ಬೆಳೆಯುತ್ತಿರುವ ಸೋಂಕಿನ ರೂಪಾಂತರಗಳ ಜೊತೆ ಹೋರಾಡುತ್ತಲೇ ಇರಬೇಕಾಗಬಹುದು ಎಂದು ಹೇಳಿದ್ದಾರೆ.
ವ್ಯಾಕ್ಸಿನೇಷನ್ ಇಲ್ಲದ ಮತ್ತು ರೂಪಾಂತರ ಸೋಂಕಿತ ಪ್ರತಿಯೊಬ್ಬ ವ್ಯಕ್ತಿಯು ಸೂಪರ್ ಸ್ಪ್ರೆಡರ್ ಆಗಿರಬಹುದು. ಲಸಿಕೆ ಪಡೆಯದ ಯಾರಿಗಾದರೂ ಒಂದು ಹಂತದಲ್ಲಿ ಸೋಂಕು ತಗಲುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಪಾಯವನ್ನುಂಟು ಮಾಡುವುದಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇರುವುದರಿಂದ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಬೇಕು ಎಂದು ಡಾ.ಸಾಯಿ ರೆಡ್ಡಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಹೊಸ ರೂಪಾಂತರವು ಬರುವ ಸಾಧ್ಯತೆಯಿದೆ. ಆದ್ದರಿಂದ ಮುಂದಿನ ಕೆಲವು ವರ್ಷಗಳಲ್ಲಿ ನಾವು ಒಂದಕ್ಕಿಂತ ಹೆಚ್ಚು ವ್ಯಾಕ್ಸಿನೇಷನ್ಗಳಿಗೆ ಸಿದ್ಧರಾಗಿರಬೇಕು. ಬೀಟಾ ಮತ್ತು ಗಾಮಾ ರೂಪಾಂತರಗಳು ಭಾಗಶಃ ಪ್ರತಿಕಾಯಗಳನ್ನು ತಪ್ಪಿಸಬಹುದು. ಆದರೆ ಡೆಲ್ಟಾ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಅವರು ಹೇಳಿದ್ದಾರೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ#Saakshatv #healthtips #Eatingcarrots https://t.co/c6YE6FC3nX
— Saaksha TV (@SaakshaTv) August 21, 2021
ಈ ಆಹಾರ ಪದಾರ್ಥಗಳನ್ನು ಸೇವಿಸುವಾಗ ಎಚ್ಚರಿಕೆ ಇರಲಿ#Saakshatv #healthtipspoison https://t.co/ixY1mPbnPj
— Saaksha TV (@SaakshaTv) August 22, 2021
ಬ್ರೆಡ್ ಉಳಿದಿದ್ದರೆ ತಯಾರಿಸಿ ರುಚಿಯಾದ ಚಾಟ್#Saakshatv #cookingrecipe https://t.co/zXFiNh1Lga
— Saaksha TV (@SaakshaTv) August 22, 2021
ಕುಟುಂಬ ಪಿಂಚಣಿಯ ಮಿತಿ ತಿಂಗಳಿಗೆ ರೂ 45,000 ದಿಂದ ರೂ1.25 ಲಕ್ಷಕ್ಕೆ ಏರಿಕೆ#familypension https://t.co/723113WFH1
— Saaksha TV (@SaakshaTv) August 22, 2021
ಉದ್ದಿನ ವಡೆ#Saakshatv #cookingrecipe #uddinavade https://t.co/t6kuH0m3kH
— Saaksha TV (@SaakshaTv) August 21, 2021
#Covid22 #deltavariant








