ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಜಲಸಮಾಧಿ , ಮೂವರು ಎಸ್ಕೇಪ್
ಮಂಡ್ಯ : ದೇವರ ದರ್ಶನಕ್ಕೆ ಬಂದಿದ್ದವ ನದಿಯಲ್ಲಿ ಸ್ನಾನಕ್ಕೆಂದು ಇಳಿದ ವೇಳೆಯೇ ಕಾಲು ಜಾರಿ ಮುಳುಗಿ ಪ್ರಾಣ ಬಿಟ್ಟಿದ್ದು, ಆತನ ರಕ್ಷಣೆಗೆ ಯತ್ನಿಸಿದ ಇನ್ನೂ ಇಬ್ಬರು ಕೂಡ ಜಲಸಮಾಧಿಯಾಗಿರುವ ಘಟನೆ ಮಂಡ್ಯದ ಹೇಮಾವತಿ ಬಲದಂಡೆ ನಾಲೆಯಲ್ಲಿ ನಡೆದಿದೆ..
ಇನ್ನೂ ಕಾಲು ಜಾರಿ ಮುಳುಗುತ್ತಿದ್ದವನ ರಕ್ಷಣೆಗೆ ನದಿಗೆ ಹಾರಿದ ಆತನ ಇಬ್ಬರು ಸ್ನೇಹಿತರು ಕೂಡ ಜಲಸಮಾಧಿಯಾಗಿದ್ದಾರೆ. ಮೈಸೂರು ಮೂಲದ ರವಿ , ಯೋಗೇಶ್, ಸೀನೂ ಮೃತ ದುರ್ದೈವಿಗಳಾಗಿದ್ದಾರೆ. ಮೊದಲಿಗೆ ರವಿ ಸ್ನಾನಕ್ಕೆ ನೀರಿಗಿಳಿದಾಗ ಮುಳುಗಿದ್ದಾನೆ.. ಆತನ ರಕ್ಷಣೆಗೆ ಹೋದ ಯೋಗೇಶ್ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಇದಾದ ನಂತರ ಸೀನೂ ಕೂಡ ಜಲಸಮಾಧಿಯಾಗಿದ್ದಾನೆ.
ಇನ್ನೂ ಈ ಮೂವರೂ ಕೂಡ ನೀರಿನಲ್ಲಿ ಮುಳುಗುತ್ತಿದ್ದಂತೆ ಅವರ ಉಳಿದ ಐವರು ಸ್ನೇಹಿತರ ಪೈಕಿ ಮೂರು ಸ್ನೇಹಿತರು ಎಸ್ಕೇಪ್ ಆಗಿದ್ದಾರೆ. ಇನ್ನೂ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಕೆ ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








