ಕೊರೊನಾ ಜೊತೆಗೆ ಬದುಕೋದನ್ನ ಕೆಲಿಬೇಕು – WHO ಡಾ. ಸೌಮ್ಯ ಸ್ವಾಮಿನಾಥನ್
ನವದೆಹಲಿ: ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ…
ಈ ಹೆಮ್ಮಾರಿಯ ಕಾಟ ಯಾವಾಗ ನಿಲ್ಲುತ್ತೆ ಅಂತ ಜನರು ಕಾಯ್ತಾಯಿದ್ದಾರೆ.. ಈ ನಡುವೆ WHO ನ ಪ್ರಮುಖ ಸೈಂಟಿಸ್ಟ್ ಆಗಿರುವ ಸೌಮ್ಯ ಸ್ವಾಮಿನಾಥನ್ ಅವರು ಈ ಬಗ್ಗೆ ಮಾತನಾಡಿ ಕೆಲ ಸಂಗತಿಗಳನ್ನ ತಿಳಿಸಿದ್ದಾರೆ.. ಮುಖ್ಯವಾಗಿ ಭಾರತದಂತಹ ದೊಡ್ಡ ದೇಶದಲ್ಲಿ ಕೋವಿಡ್-19 ಸೋಂಕು ಪ್ರತಿಹಂತಗಳನ್ನು ತಲುಪಿದ್ದು, ಜನರು ಈ ಹಂತದಲ್ಲಿ ವೈರಾಣುವಿನೊಂದಿಗೆ ಜೀವಸುವುದನ್ನು ಕಲಿಯ ಬೇಕು ಎಂದು ಹೇಳಿದ್ದಾರೆ.
ಎಪಿಡೆಮಿಕ್ ಹಂತದಲ್ಲಿ ಸೋಂಕು ಹರಡುವ ಲಕ್ಷಣಗಳು ಕಡಿಮೆ ಮತ್ತು ಮಧ್ಯಮ ಮಟ್ಟದಲ್ಲಿರುತ್ತದೆ. ಜನ ಈ ಹಂತದಲ್ಲಿ ವೈರಾಣುವಿನೊಂದಿಗೆ ಜೀವಸುವುದನ್ನು ಕಲಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಭಾರತದಂತಹ ದೊಡ್ಡ ದೇಶದ ಜನಸಂಖ್ಯೆ, ಇಲ್ಲಿನ ವೈವಿಧ್ಯತೆಗಳನ್ನು ಗಮನಿಸಿದರೆ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ರೋಗ ನಿರೋಧಕ ಶಕ್ತಿಗಳನ್ನು ಕಾಣಬಹುದು ಹಾಗಾಗಿ ಇಲ್ಲಿ ಸೋಂಕಿನ ಏರಿಳಿತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ಭಾರತ ಪ್ರವೇಶಿಸಬೇಕಾದ್ರೆ ಅಘ್ಘಾನ್ ಪ್ರಜೆಗಳ ಬಳಿ ಇ-ವೀಸಾ ಇರಲೇ ಬೇಕು..!
ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಕೋವ್ಯಾಕ್ಸಿನ್ ಕುರಿತು ತೃಪ್ತಿದಾಯಕ ಅಭಿಪ್ರಾಯ ಹೊಂದಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕ್ಲಿಯರೆನ್ಸ್ ನೀಡುವ ಸಾಧ್ಯತೆ ಇದೆ. ಕೆಲದಿನಗಳ ಅಧ್ಯಯನದಲ್ಲಿ ತಿಳಿದು ಬಂದ ಪ್ರಕಾರ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಹೆಚ್ಚು ಹರಡುತ್ತಿಲ್ಲ. ಹಾಗಾಗಿ ಇದು ಎಪಿಡೆಮಿಕ್ ಹಂತ ತಲುಪುತ್ತಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೂ ಕೊರೊನಾ ಸೋಂಕು ತಗುಲಿದೆ ಹಾಗೂ ಅವರಿಂದ ಬೇರೆಯವರಿಗೂ ಹರಡಿದೆ, ಆದರೆ ಮಕ್ಕಳಲ್ಲಿ ಕಂಡುಬರುವ ಸೋಂಕಿನ ತೀವ್ರತೆ ಕಡಿಮೆ ಪ್ರಮಾಣದಲ್ಲಿದೆ ಎಂದು ತಿಳಿದುಬಂದಿದ್ದು, ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರು ವಯಸ್ಕರಲ್ಲಿ ಕಂಡುಬಂದಂತಹ ಸಾವು ನೋವುಗಳಂತೆ ಮಕ್ಕಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಮುಂದೆ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಚಿಕಿತ್ಸೆಗಾಗಿ ಆಸ್ಪತ್ರೆಗಳು ಸಜ್ಜಾಗಿರುವುದು ಉತ್ತಮ. 2022ರ ವೇಳೆಗೆ ಶೇ.70ರಷ್ಟು ಮಂದಿಗೆ ಲಸಿಕೆ ನೀಡಲಾಗಿರುತ್ತದೆ. ಬಳಿಕ ದೇಶ ಸಹಜ ಸ್ಥಿತಿಯತ್ತ ಮರಳಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.








