ಐಪಿಎಲ್ 2021 | ಆರ್ ಸಿಬಿ ಸೇರಿದ ಇಂಗ್ಲೆಂಡ್ ನ ಯಂಗ್ ಗನ್
ನವದೆಹಲಿ : ಇಂಗ್ಲೆಂಡ್ ನ ಯುವ ಬೌಲರ್ ಜಾರ್ಜ್ ಗಾರ್ಟನ್ ಎರಡನೇ ಹಂತದ ಐಪಿಎಲ್ ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.
ಯುಎಇಯಲ್ಲಿ ನಡೆಯಲಿರುವ 14ನೇ ಆವೃತ್ತಿಯ 2ನೇ ಹಂತದ ಐಪಿಎಲ್ ಗಾಗಿ ಆರ್ ಸಿಬಿ ಕೇನ್ ರಿಚರ್ಡ್ ಸನ್ ಬದಲಿಗೆ ಇಂಗ್ಲೆಂಡ್ ಯುವ ವೇಗಿ ಜಾರ್ಜ್ ಗಾರ್ಟನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಶನಿವಾರ ಆರ್ ಸಿಬಿ ಆಸ್ಟ್ರೇಲಿಯಾದ ಆಡಂ ಜಂಪಾ ಬದಲಿಗೆ ಶ್ರೀಲಂಕಾದ ಸ್ಪಿನ್ ಆಲ್‍ರೌಂಡರ್ ವನಿಂದು ಹಸರಂಗ, ಫಿನ್ ಅಲೆನ್ ಬದಲಿಗೆ ಸಿಂಗಾಪುರ್ ತಂಡದ ಟಿಮ್ ಡೇವಿಡ್ ಮತ್ತು ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಬದಲಿಗೆ ಶ್ರೀಲಂಕಾದ ದುಷ್ಮಂತ್ ಚಮೀರರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಘೋಷಿಸಿತ್ತು.
ಇದೀಗ ಕೇನ್ ರಿಚರ್ಡ್ ಸನ್ ಬದಲಿಗೆ ಜಾರ್ಜ್ ಗಾರ್ಟನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.









