ರಾಖಿಗೆ ನಾಯಿ ಕಡಿತ – ನಾಯಿಗೆ ಕಚ್ಚದೇ ಬಿಡಲ್ಲಾ ಅಂದ ಡ್ರಾಮಾ ಕ್ವೀನ್..!
ಮುಂಬೈ: ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ , ಟ್ರೋಲ್ ಆಗ್ತಲೇ ಪೆದ್ದಿ ಪೆದ್ದಿಯಂತೆ ವರ್ತಿಸುತ್ತಾ , ಕೆಲವೊಮ್ಮೆ ದಡ್ಡರ ರೀತಿ ಹೇಳಿಕೆಗಳನ್ನ ನೀಡುವ ರಾಖಿ ಸಾವಂತ್ ಗೆ ಇದೀಗ ನಾಯಿ ಕಚ್ಚಿದ್ಯಂತೆ.. ಅಷ್ಟೇ ಅಲ್ಲ ಆ ನಾಯಿಗೆ ಕಚ್ಚುತ್ತಾರಂತೆ ರಾಖಿ.
ರಾಖಿ ಹಿಂದೆ ನಾಯಿ ಬರುತ್ತಿರುವ ವೀಡಿಯೋ ಸಹ ವೈರಲ್ ಆಗಿದೆ. ಬಿಗ್‍ಬಾಸ್ ಓಟಿಟಿ ಶೋಗೆ ರಾಖಿ ಸಾವಂತ್ ಭಾನುವಾರ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ದೊಡ್ಡದಾದ ಗೌನ್ ಧರಿಸಿ ವ್ಯಾನಿಟಿ ವ್ಯಾನ್ ನಿಂದ ಹೊರ ಬಂದ ರಾಖಿ ಸಾವಂತ್ ಹಿಂದೆಯೇ ಒಂದು ನಾಯಿ ಬರುತ್ತಿತ್ತು. ಅಯ್ಯೋ ನಾಯಿ ಕಚ್ಚಬಹುದು ಅದನ್ನ ಓಡಿಸಿ ಎಂದು ರಾಖಿ ಹೇಳೋದನ್ನು ವೀಡಿಯೋದಲ್ಲಿ ನೋಡಬಹುದು. ಈ ವೀಡಿಯೋದಲ್ಲಿ ರಾಖಿ ಸಾವಂತ್ ಸುರಕ್ಷಿತವಾಗಿ ಸ್ಟುಡಿಯೋ ತಲುಪಿದ್ದಾರೆ.
ಆದ್ರೆ ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿರುವ ರಾಖಿ ನನ್ನ ಕಾಲಿಗೆ ನಾಯಿ ಕಚ್ಚಿದೆ. ನನಗೆ ಏನಾಯ್ತಿದೆ. ಕೊರೊನಾಗಾಗಿ ಇಂಜೆಕ್ಷನ್ ಚುಚ್ಚಿಕೊಳ್ಳಬೇಕು, ಕೆಲವೊಮ್ಮೆ ಡಿ3, ಇಮ್ಯುನಿಟಿ, ಈಗ ನಾಯಿಗಾಗಿ. ಸದ್ಯ ನಾಯಿ ಕಚ್ಚಿದ್ದರಿಂದ ಇಂಜೆಕ್ಷನ್ ತೆಗೆದುಕೊಳ್ಳಬೇಕಿದೆ. ಈಗ ನಾನು ಆ ನಾಯಿಯನ್ನು ಕಚ್ಚುತ್ತೇನೆ ಎಂದು ಹೇಳಿಕೊಂಡಿದ್ದಾರೆ.
“ ಮೊಘಲರು ದುಷ್ಟರಲ್ಲ, ಅವರೇ ಈ ದೇಶ ಕಟ್ಟಿದ್ದು…” – ಕಬೀರ್ ಖಾನ್