“ ನಿಮ್ಮ ಆರೋಗ್ಯ ನೀವೇ ಕಾಪಾಡಿಕೊಳ್ಳಿ – ಸರ್ಕಾರ ದೇಶದ ಆಸ್ತಿ ಮಾರಾಟದಲ್ಲಿ ಬ್ಯುಸಿಯಾಗಿದೆ” – ರಾಹುಲ್
ಕೋವಿಡ್ ಬಗ್ಗೆ ಮಾತನಾಡುತ್ತಾ ಸದಾ ಕೇಂದ್ರ ಸರ್ಕಾರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್ ನಾಯಕ ರಾಹುಕ ರಾಹುಲ್ ಗಾಂಧಿ ಅವರು ಇದೀಗ ಕೇಂದ್ರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಆರೋಗ್ಯದ ಬಗ್ಗೆ ನೀವೇ ಕಾಳಜಿ ವಹಿಸಿ. ಸರ್ಕಾರ ದೇಶದ ಆಸ್ತಿ ಮಾರಾಟದಲ್ಲಿ ಬ್ಯುಸಿಯಾಗಿದೆ ಎಂದು ಟೀಕಿಸಿದ್ದಾರೆ.
ಇತ್ತೀಚಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರದ ನಡೆ ಖಂಡಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯನರ್ಜಿ ಸೇರಿದಂತೆ ಅನೇಕ ಪ್ರತಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಕಳೆದ 70 ವರ್ಷಗಳಲ್ಲಿ ಕಟ್ಟಲಾದ ದೇಶದ ಆಸ್ತಿಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಗುಡುಗಿದ್ದಾರೆ.








