ಹೊಸಕೋಟೆ ಪಟ್ಟಣಕ್ಕೆ ಮೆಟ್ರೊ ವಿಸ್ತರಿಸಿ : ಎಂಟಿಬಿ ನಾಗರಾಜ್ MTB Nagaraj saaksha tv
ಬೆಂಗಳೂರು : ನಗರದ ಹೊರವಲಯ ಹೊಸಕೋಟೆ ಪಟ್ಟಣಕ್ಕೆ ಮೆಟ್ರೊ ರೈಲು ಸಂಚಾರ ವಿಸ್ತರಿಸುವಂತೆ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮೈಸೂರು – ಕೆಂಗೇರಿ ವಿಸ್ತರಿತ ಮಾರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಟಿಬಿ ನಾಗರಾಜ್ ಅವರು, ಮುಖ್ಯಮಂತ್ರಿಗಳ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೊಸಕೋಟೆ ಬಿಬಿಎಂಪಿ ವ್ಯಾಪ್ತಿಯಿಂದ 10 ಕಿಮೀ ದೂರದಲ್ಲಿದೆ. ವೈಟ್ ಫೀಲ್ಡ್ ಸುತ್ತ-ಮುತ್ತ ನೂರಾರು ಐಟಿ ಕಂಪನಿಗಳು ಬೀಡು ಬಿಟ್ಟಿವೆ.
ವಾಣಿಜ್ಯ ಕಟ್ಟಡಗಳು, ಬೃಹತ್ ಕಟ್ಟಡಗಳಿದ್ದು ಲಕ್ಷಾಂತರ ಅಪಾರ್ಟ್ ಮೆಂಟ್ ಗಳು ಇವೆ. ಪರಿಣಾಮ ಹೊಸಕೋಟೆ ಪಟ್ಟಣದ ಸುತ್ತ-ಮುತ್ತ ತೀವ್ರ ಸಂಚಾರದ ಒತ್ತಡ ನಿರ್ಮಾಣವಾಗಿದೆ.
ಹೀಗಾಗಿ ಮೆಟ್ರೊ ರೈಲು ಮಾರ್ಗವನ್ನು ಹೊಸಕೋಟೆ ಪಟ್ಟಣದವರೆಗೆ ವಿಸ್ತರಿಸುವಂತೆ ಮನವಿ ಮಾಡುತ್ತೇನೆ ಎಂದು ತಮ್ಮ ಮನವಿ ಪತ್ರದಲ್ಲಿ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.









