‘ವಿಕ್ರಾಂತ್ ರೋಣ’ ನ ಆಡಿಯೋ ರೈಟ್ಸ್ ಖರೀದಿಸಿದ ಲಹರಿ ಸಂಸ್ಥೆ , ಟಿ ಸೀರೀಸ್..!
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇ ಗೆ ಕೌಂಟ್ ಡೌನ್ ಶುರುವಾಗಿದೆ.. ಇದರ ಬೆನ್ನಲ್ಲೇ ಕಿಚ್ಚ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾದ ಒಂದೊಂದೇ ಅಪ್ ಡೇಟ್ ಗಳು ಹೊರಬೀಳ್ತಿವೆ. ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಇದೀಗ, ಸುದೀಪ್ ಹುಟ್ಟುಹಬ್ಬ ಹಿನ್ನೆಲೆ ಕಿಚ್ಚನ ಹೊಸ ಪೋಸ್ಟರ್ ರಿಲೀಸ್ ಮಾಡಲು ಸಿನಿಮಾ ತಂಡ ನಿರ್ಧಾರ ಮಾಡಿದೆ ಎನ್ನಲಾಗ್ತಾಯಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.
ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನ ವಿಕ್ರಾಂತ್ ರೋಣ ಚಿತ್ರತಂಡ ಟೀಸರ್ ಅಥವಾ ಸುದೀಪ್ ಹೊಸ ಲುಕ್ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ದೇ ಸೆಪ್ಟೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಡೆಡ್ ಮ್ಯಾನ್ ಆಂಥೆಮ್ ಸಾಂಗ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಇದ್ರ ಬೆನ್ನಲ್ಲೇ ಚಿತ್ರದ ಬಗೆಗಿನ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಅದೇನೆಂದ್ರೆ ಸಿನಿಮಾದ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಹೌದು ಕನ್ನಡ , ತೆಲುಗು , ತಮಿಳು ಹಾಗೂ ಮಳಯಾಳಂ ಭಾಷೆಗಳ ಆಡಿಯೋ ಹಕ್ಕನ್ನ ಪ್ರತಿಷ್ಠಿತ ಸಂಸ್ಥೆ ಲಹರಿ ಮ್ಯೂಸಿಕ್ ಖರೀದಿಸಿದೆ ಎನ್ನಲಾಗಿದೆ. ಆಡಿಯೋ ಹಕ್ಕು ಸೇಲ್ ಆಗಿರುವ ಬಗ್ಗೆ ಸ್ವತಃ ಲಹರಿ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಮೂಲಕ ತಿಳಿಸಿದೆ. ಇನ್ನೂ ಹಿಂದಿಯಲ್ಲಿ ಟಿ-ಸಿರೀಸ್ ಸಂಸ್ಥೆ ವಿಕ್ರಾಂತ್ ರೋಣ ಮ್ಯೂಸಿಕ್ ಪಡೆದುಕೊಂಡಿರೋದಾಗಿ ತಿಳಿದುಬಂದಿದೆ.
ಭಜರಂಗಿ 2 ರಿಲೀಸ್ ದಿನಾಂಕ ಘೋಷಣೆ..? ಟ್ರೇಲರ್ ರಿಲೀಸ್ ಗೆ ರೆಡಿ..!








