ಅಫ್ಗಾನ್ : ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಸದಾ ನಿಲ್ಲುತ್ತದೆ – ಮೋದಿ
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ.. ಈ ನಡುವೆ ಭಾರತ , ಅಮೆರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳು ಅಫ್ಗಾನ್ ನಿಂದ ನಾಗರಿಕರ ಸ್ಥಳಾಂತರದಲ್ಲಿ ತೊಡಗಿವೆ.
ಈ ನಡುವೆ ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಯಾವತ್ತು ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ವಿಡೀಯೋ ಕಾನ್ಫರೆನ್ಸ್ ಮೂಲಕ ನವೀಕೃತ ಜಲಿಯನ್ ವಾಲಾಬಾಗ್ ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿದ ನಮೋ, ಭಾರತ ಹಲವಾರು ಸವಾಲುಗಳನ್ನು ಮೆಟ್ಟಿನಿಂತು ಅಘ್ಘಾನಿಸ್ತಾನದಲ್ಲಿ ಅಪಾಯದಲ್ಲಿದ್ದ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಈ ಕಾರ್ಯ ಇನ್ನೂ ಕೂಡ ಮುಂದುವರಿಯುತ್ತದೆ. ತಾಲಿಬಾನಿಗಳ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನ ನಲುಗಿ ಹೋಗಿದೆ. ಈ ನಡುವೆ ಅಲ್ಲಿದ್ದ ನೂರಾರು ಭಾರತೀಯರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡುವ ಮೂಲಕ ದೇಶಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದಿದ್ದಾರೆ.
ಇತ್ತ ಕ್ಷಣಕ್ಷಣಕ್ಕೂ ಕಾಬುಲ್ ವಿಮಾನ ನಿಲ್ದಾಣದಲ್ಲಿ ದಾಳಿಯ ಆತಂಕ ಹೆಚ್ಚಾಗ್ತಿದೆ.. ಪರಿಸ್ಥಿತಿ ಹದಗೆಡುತ್ತಿದೆ.. ಒಂದು ಪ್ಲೇಟ್ ರೈಸ್ ಗೆ 7,500 , ಒಂದು ಬಾಟೆಲ್ ನೀರಿಗೆ 3,000 ಕೊಡಬೇಕಾದ ಸ್ಥಿತಿ ಅಲ್ಲಿನ ಜನರಿಗೆ ಬಮದೊದಗಿದೆ. ಈ ನಡುವೆ ಜನರು ಈಗ ಹಣಕ್ಕಾಗಿ ಪರದಾಡುವಂತೆ ಆಗಿದೆ. ಮೂರು ದಿನಗಳ ಹಿಂದೆಯಷ್ಟೇ ಬ್ಯಾಂಕ್ ವಹಿವಾಟು ಪ್ರಾರಂಭವಾಗಿದ್ದು, ಇದರ ಮಧ್ಯೆ ನ್ಯೂ ಕಾಬೂಲ್ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಇತರೆ ಸರ್ಕಾರಿ ಉದ್ಯೋಗಿಗಳು ತಮ್ಮ ಐದಾರು ತಿಂಗಳ ವೇತನ ನೀಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.
ಜನರು ಎಟಿಎಂ ಮುಂದೆ ಕ್ಯೂ ನಿಂತು ಹಣವಿಲ್ಲದೇ ಒದ್ದಾಡುವಂತಾಗಿದೆ. ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ, ಸಹ ಅವುಗಳಲ್ಲಿ ದಿನಕ್ಕೆ 200 ಡಾಲರ್ ಅಷ್ಟೇ ಹಣ ತೆಗೆಯಲು ಸಾಧ್ಯವಾಗುತ್ತಿದೆ. ಈ ಕಾರಣಕ್ಕೆ ಎಟಿಎಂ ಮುಂದೆ ಜನರ ಕ್ಯೂ ನಿಂತಿದ್ದಾರೆ. ಇನ್ನೂ ಪಾಕಿಸ್ತಾನ ಚೈನಾ ತಾಲಿಬಾನಿಗಳಿಗೆ ಬೆಂಬಲಿಸಿದ್ದು, ಭಾರತದ ವಿರುದ್ಧ ಮುಗಿಬೀಳುವ ತಂತ್ರ ಹೊಂದಿರುವುದಾಗಿ ತಿಳಿದುಬಂದಿತ್ತು. ಸಾಲದಕ್ಕೆ ಪಾಕ್ ಕಾಶ್ಮೀರವನ್ನ ತಾಲಿಬಾನಿಗಳ ಸಹಾಯದಿಂದ ಕಿತ್ತುಕೊಳ್ಳಲಿದೆ ಎಂದು ಲೈವ್ ಡಿಬೇಟ್ ನಲ್ಲಿ ಪಾಕ್ ಆಡಳಿತ ಪಕ್ಷದ ಮುಖಂಡೆ ಬಾಯಿ ಬಡೆದುಕೊಂಡಿದ್ದರು..
ಅಫ್ಗಾನ್ ನಲ್ಲಿ ಊಟಕ್ಕೆ ಹಾಹಾಕಾರ , ಹಣವಿಲ್ಲದೇ ಪರದಾಟ – ATM ಗಳೆದುರು ಜನ ಸಾಗರ..!
ಭಾರತಕ್ಕೆ ತಾಲಿಬಾನಿಗಳಿಂದ ಕೆಡುಕಾಗುವ ಅನುಮಾನವಿರುವ ಬೆನ್ನಲ್ಲೇ ಇದೀಗ ತಾಲಿಬಾನ್ ನ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್ , ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ಕರೆ ನೀಡಿದ್ದಾರೆ. ಕಾಬೂಲ್ ಪತನದ ನಂತರ ಭಾಷಣದಲ್ಲಿ ತಾಲಿಬಾನ್ ನಾಯಕ ಮೊದಲ ಬಾರಿಗೆ ಮಾತನಾಡಿ ಭಾರತದ ಬಗ್ಗೆಯೂ ಪ್ರಸ್ತಾಪಿಸಿದ್ದಲ್ಲದೇ ಉತ್ತಮ ಸಂಬಂಧ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ.