ಪ್ರತಿಯೊಬ್ಬ ನಾಗರಿಕರಿಗೂ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಿರುವ ರಾಜ್ಯವಿದು..!
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ.. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶ್ವಾದ್ಯಂತ ಕೊರೊನಾ ವೈರಸ್ , ರೂಪಾಂತರ ತಳಿಗಳ ಹಾವಳಿಯ ನಡುವೆ ಭಾರತ ಸೇರಿದಂತೆ ಇಡೀ ವಿಶ್ವಾದ್ಯಂತ ಕೊರೊನಾ ಲಸಿಕೆ ಅಭಿಯಾನವೂ ಹೆಚ್ಚಾಗಿದೆ..
ಇದೀಗ ಭಾರತದ ಹಿಮಾಚಲಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಕೂಡ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಿರೋದಾಗಿ ಅಲ್ಲಿನ ಸರ್ಕಾರವು ಪ್ರಕಟಿಸಿದೆ. ಹೌದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ರಿಗೂ ಕೋವಿಡ್ 19 ಲಸಿಕೆಯ ಮೊದಲ ಡೋಸ್ ನೀಡಿರುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ. ಅಲ್ಲದೇ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡಿರುವ ಮೊದಲ ರಾಜ್ಯವೂ ಕೂಡ ಇದೇ ಆಗಿದೆ. ಎಂದು ಆರೋಗ್ಯ ಸಚಿವ ಡಾ.ರಾಜೀವ್ ಸೈಝಲ್ ಹೇಳಿಕೆ ನೀಡಿದ್ದಾರೆ. ಅಲ್ಲದೇ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, 2021ರ ನವೆಂಬರ್ 30ರ ಒಳಗಾಗಿ ಎಲ್ಲರಿಗೂ ಎರಡು ಡೋಸ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಭಾರತ ಸೇರಿದಂತೆ ಇತರೇ ರಾಷ್ಟ್ರಗಳಿಗೆ ವೀಸಾ ಪುನರಾರಂಭಿಸಿದ ಯುಎಇ
`ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ವ್ಯಕ್ತಿ ಅಂದರ್








